ಕರ್ನಾಟಕ

karnataka

ETV Bharat / state

ಕಡಬ: ಪಿಡಿಒ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ, ಐವರ ವಿರುದ್ಧ ಕೇಸ್ ದಾಖಲು - ಅಧಿಕಾರಿ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ

ಕುಟ್ರುಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅವರ ಜೊತೆಗಿದ್ದ ಇತರರಿಗೂ ನಿಂದಿಸಿ ಬೆದರಿಕೆ ಒಡ್ಡಲಾಗಿದೆ ಎಂದು ಕೇಸು ದಾಖಲಾಗಿತ್ತು.

case-filed-against-five-persons-for-assaulting-pdo
ಕಡಬ: ಪಿಡಿಒ ಮೇಲೆ ಹಲ್ಲೆ ಕರ್ತವ್ಯಕ್ಕೆ ಅಡ್ಡಿ

By

Published : Jan 3, 2021, 4:13 PM IST

ಕಡಬ:ಕರ್ತವ್ಯನಿರತ ಪಂಚಾಯತ್ ಅಭಿವೃದ್ದಿ ಅಧಿಕಾರಿ(ಪಿಡಿಒ) ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ನಡೆದಿದೆ.

ಕಡಬ: ಪಿಡಿಒ ಮೇಲೆ ಹಲ್ಲೆ ಕರ್ತವ್ಯಕ್ಕೆ ಅಡ್ಡಿ

ಕಡಬ ತಾಲೂಕಿನ ಬಲ್ಯ ಸಂಪನಡ್ಕದಲ್ಲಿ ಕುಟ್ರುಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ಮೇಲೆ ಹಲ್ಲೆ ನಡೆಸಿ, ಅವರ ಜೊತೆಗಿದ್ದ ಇತರರಿಗೂ ನಿಂದಿಸಿ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ತೆರಳಿದ್ದಾಗ ಘಟನೆ ನಡೆದಿತ್ತು.

ಓದಿ: ಬಾಲಕಿ ಫೋಟೊ ತೆಗೆದ ಅನ್ಯಕೋಮಿನ ಯುವಕ, ಕಡಬದಲ್ಲಿ ಬಿಗುವಿನ ವಾತಾವರಣ

ಈ ಸಂದರ್ಭ ಕಾರಿನಲ್ಲಿ ದಿಗ್ಬಂಧನ ವಿಧಿಸಿ ಹಲ್ಲೆ ಮಾಡಲಾಗಿದೆ ಎಂಬುದಾಗಿ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ಪಿಡಿಒ ಮೊಬೈಲ್​​ನಲ್ಲಿದ್ದ ವಿಡಿಯೋಗಳನ್ನು ಆರೋಪಿಗಳು ಡಿಲಿಟ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೂಬ್, ಅಬ್ದುಲ್ ಕರೀಂ, ಹನೀಫ್, ರಹಿಮತ್, ಇಕ್ಬಾಲ್ ಎಂಬ ಐವರ ಮೇಲೆ ಕೇಸ್ ದಾಖಲಾಗಿದೆ.

ಅಪ್ರಾಪ್ತೆಯ ಫೋಟೋ ತೆಗೆದ ಪ್ರಕರಣದಲ್ಲೂ ಇದ್ದಾನೆ ಆರೋಪಿ:

ಇದರಲ್ಲಿ ಯಾಕೂಬ್ ಎಂಬಾತ ನಿನ್ನೆ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪ್ರಕರಣದ ಆರೋಪಿಯಾಗಿದ್ದಾನೆ. ಇದೀಗ ಪಿಡಿಒ ಮೇಲೆ ಹಲ್ಲೆ ಪ್ರಕರಣ ಸೇರಿ ಎರಡು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ.

ABOUT THE AUTHOR

...view details