ಮಂಗಳೂರು: ನಗರದ ಹೊರವಲಯದ ಪಡೀಲ್ನಲ್ಲಿ ನಿರ್ಮಾಣವಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭವನ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದ್ದು, ನಿಗದಿತ ಅವಧಿಗೆ ಪೂರ್ಣಗೊಂಡಿಲ್ಲ.
₹41 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿ ಆರಂಭಗೊಂಡಿದ್ದು 2018ರ ಫೆಬ್ರುವರಿ 9ರಂದು. ಆದರೆ 18 ತಿಂಗಳಲ್ಲಿ ಅಂದರೆ 2019ರ ಜುಲೈಗೆ ಪೂರ್ಣವಾಗಬೇಕಿದ್ದ ಈ ಕಾಮಗಾರಿ ಇನ್ನೂ ಕುಂಟುತ್ತಲೇ ಸಾಗುತ್ತಿದೆ.
ಪ್ರಗತಿಯಲ್ಲಿರುವದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭವನ ನಿರ್ಮಾಣ ಕಾಮಗಾರಿ 2014-15ರಲ್ಲಿ ಟೆಂಡರ್ ಕರೆಯಲಾಗಿದ್ದ ಈ ಯೋಜನೆಗೆ ₹41 ಕೋಟಿ ಮೀಸಲಿರಿಸಲಾಗಿತ್ತು. ಜಿಲ್ಲಾಧಿಕಾರಿ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯ ₹30 ಕೋಟಿ, ಆರೋಗ್ಯ ಇಲಾಖೆ ₹7 ಕೋಟಿ, ಕಾರ್ಮಿಕ ಇಲಾಖೆ ₹1 ಕೋಟಿ, ಸಣ್ಣ ನೀರಾವರಿ ₹1 ಕೋಟಿ, ಇತರ ಇಲಾಖೆಗಳಿಂದ ₹2 ಕೋಟಿ ಸೇರಿ ₹41 ಕೋಟಿ ಮೀಸಲಿರಿಸಲಾಗಿತ್ತು.
ಆದರೆ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಯೋಜನೆಗೆ ₹12ರಿಂದ 14 ಕೋಟಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.