ಮಂಗಳೂರು:ಗೆಳೆಯರೊಂದಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ ಇಂದು ಮಂಗಳೂರಿನ ಬೆಂಗರೆಯಲ್ಲಿ ಪತ್ತೆಯಾಗಿದೆ.
ಹಬ್ಬದ ರಜೆಯಲ್ಲಿ ಸಮುದ್ರಕ್ಕೆ ಈಜಲು ಹೋದವನು ಮತ್ತೆ ಬರಲೇ ಇಲ್ಲ... - ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು
ಗೆಳೆಯರೊಂದಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ ಇಂದು ಮಂಗಳೂರಿನ ಬೆಂಗರೆಯಲ್ಲಿ ಪತ್ತೆಯಾಗಿದೆ.
ಸಮುದ್ರಪಾಲಾದ ಬಾಲಕನ ಮೃತದೇಹ ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಂಗರೆ ನಿವಾಸಿ ಅಲ್ತಾಫ್ ಎಂಬವರ ಪುತ್ರ ಶಾಹಿಲ್ ( 16) ನಿನ್ನೆ ಸಮುದ್ರದಲ್ಲಿ ಗೆಳೆಯರೊಂದಿಗೆ ಆಟವಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು. ಮೃತ ಬಾಲಕ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಸಮುದ್ರಕ್ಕೆ ಇಳಿದಾಗ ಈ ದುರ್ಘಟನೆ ನಡೆದಿತ್ತು.
ಅಗ್ನಿ ಶಾಮಕದಳ ಸಿಬ್ಬಂದಿ ಸತತ ಹುಡುಕಾಟದಿಂದ ಇಂದು ಬಾಲಕನ ಮೃತದೇಹ ಕಸಬ ಬೆಂಗರೆ ಸಮೀಪದ ಸಮುದ್ರತೀರದಲ್ಲಿ ಪತ್ತೆಯಾಗಿದೆ.