ಕರ್ನಾಟಕ

karnataka

ETV Bharat / state

ಪಿಲಿಕುಳ ನಿಸರ್ಗಧಾಮಕ್ಕೆ ನೂತನ ಅತಿಥಿಗಳ ಆಗಮನ

ಮಂಗಳೂರು ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಅಪರೂಪದ ನಾಲ್ಕು ಕಪ್ಪು ಹಂಸಗಳು, ಎರಡು ಪಟ್ಟೆ ಹೈನಾಗಳು ಮತ್ತು ಎರಡು ಕಾಡು ಕೋಣದ ಮರಿಗಳು ಆಗಮಿಸಿದೆ.

Black swans and striped hyenas at the Pilikula Nature Park
ಪಿಲಿಕುಳ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನ

By

Published : Feb 29, 2020, 5:06 AM IST

ಮಂಗಳೂರು:ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಅಪರೂಪದ ನಾಲ್ಕು ಕಪ್ಪು ಹಂಸಗಳು, ಎರಡು ಪಟ್ಟೆ ಹೈನಾಗಳು ಮತ್ತು ಎರಡು ಕಾಡು ಕೋಣದ ಮರಿಗಳು ಆಗಮಿಸಿದೆ. ಈ ಮೂಲಕ ಪಿಲಿಕುಳಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಂತೆ, ಪಿಲಿಕುಳ ಮತ್ತು ಮೈಸೂರು ಮೃಗಾಲಯಗಳ ಒಡಂಬಡಿಕೆ ಪ್ರಕಾರ ತಮ್ಮಲ್ಲಿರುವ ಹೆಚ್ಚುವರಿ ಮೃಗಗಳನ್ನು ವಿನಿಮಯ ಮಾಡಿಕೊಂಡಿವೆ.

ಪಿಲಿಕುಳ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನ

ಪಿಲಿಕುಳದಲ್ಲಿ ಈಗಾಗಲೇ ಎರಡು ಕಾಡುಕೋಣಗಳಿದ್ದು, ಈಗ ಮತ್ತೆರಡು ಕಾಡು ಕೋಣದ ಮರಿಗಳು ಆಗಮಿಸುವ ಮೂಲಕ‌‌ ಅದರ ಸಂಖ್ಯೆ ನಾಲ್ಕಕ್ಕೆ ಏರಿದೆ. ಪಿಲಿಕುಳದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು 3 ವರ್ಷ ಪ್ರಾಯದ ರಾಯಲ್ ಬೆಂಗಾಲ್ ಹುಲಿ, ನಾಲ್ಕು ಕಾಳಿಂಗ ಸರ್ಪ ಮತ್ತು ಎರಡು ಕಾಡು ಬಾತುಗಳನ್ನು ನೀಡಲಾಗಿದೆ.

ಕಪ್ಪು ಹಂಸಗಳು ಈಗಾಗಲೇ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದ್ದು, ಹೈನಾಗಳು ಒಂದು ವಾರದ ನಂತರ ಸಂದರ್ಶಕರಿಗೆ ವೀಕ್ಷಣೆಗೆ ಲಭ್ಯವಾಗಲಿವೆ. ಶ್ರೀಘ್ರದಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಬಿಳಿ ಮತ್ತು ಕಂದು ರಿಯಾ ಪಕ್ಷಿಗಳು, ಎರಡು ಸ್ವೇಂಪ್ ಜಿಂಕೆಗಳು, ಒರ್‍ಯಂಟಾಲ್ ಡಾರ್ಟಾರ್ ಪಕ್ಷಿಗಳು, ಬಿಳಿ ಹುಲಿಗಳು ಆಗಮಿಸಲಿವೆ ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾವನ ನಿರ್ದೇಶಕ ಹೆಚ್.ಜೆ.ಭಂಡಾರಿ ಅವರು ತಿಳಿಸಿದ್ದಾರೆ.

ABOUT THE AUTHOR

...view details