ಕರ್ನಾಟಕ

karnataka

ETV Bharat / state

Praveen Murder case.. ತಂದೆಯಿಂದಲೇ ಮಗನ ಚಿತೆಗೆ ಅಗ್ನಿಸ್ಪರ್ಶ, ಕುಟುಂಬಸ್ಥರ ಆಕ್ರಂದನ - Praveen Nettaru funeral in Bellare

ಹಿಂದೂ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ- ತಂದೆಯಿಂದ ಮಗನ ಚಿತೆಗೆ ಅಗ್ನಿಸ್ಪರ್ಶ- ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮಗನ ಚಿತೆಗೆ ತಂದೆಯಿಂದಲೇ ಅಗ್ನಿಸ್ಪರ್ಶ
ಮಗನ ಚಿತೆಗೆ ತಂದೆಯಿಂದಲೇ ಅಗ್ನಿಸ್ಪರ್ಶ

By

Published : Jul 27, 2022, 5:27 PM IST

Updated : Jul 27, 2022, 6:22 PM IST

ಸುಳ್ಯ(ದಕ್ಷಿಣ ಕನ್ನಡ): ಹತ್ಯೆಗೀಡಾದ ಹಿಂದೂ ಯುವ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರ್ ಅವರ ಸ್ವಗ್ರಾಮ ಬೆಳ್ಳಾರೆಯ ನೆಟ್ಟಾರುವಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಬಿಲ್ಲವ ಸಂಪ್ರದಾಯದಂತೆ ಮೃತದೇಹದ ಅಂತಿಮ ವಿಧಿ-ವಿಧಾನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪ್ರವೀಣ್ ನೆಟ್ಟಾರ್ ಮೃತದೇಹವನ್ನು ಸಾಗಿಸುತ್ತಿರುವುದು

ಈ ವೇಳೆ ಕುಟುಂಬಸ್ಥರಿಗೆ ಮಾತ್ರ ಸ್ಥಳದಲ್ಲಿ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಪ್ರವೀಣ್‌ ಪತ್ನಿ, ತಂದೆ-ತಾಯಿ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆಯೇ ಮಗನ ಚಿತೆಗೆ ಅಗ್ನಿಸ್ಪರ್ಶ ನೀಡುವ ದೃಶ್ಯ ಮನಕಲಕುವಂತಿತ್ತು.

ತಂದೆಯಿಂದಲೇ ಮಗನ ಚಿತೆಗೆ ಅಗ್ನಿಸ್ಪರ್ಶ

ಬೆಳ್ಳಾರೆಯಲ್ಲಿ ಪೊಲೀಸರು ಮೈಕ್ ಮೂಲಕ ಜನರು ಚದುರಿ ಹೋಗುವಂತೆ ಕರೆ ನೀಡುತ್ತಿದ್ದರು. ಸಂಸದ ನಳಿನ್ ಕುಮಾರ್ ಕಾರನ್ನು ತಡೆದ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ಸಮಯದಲ್ಲಿ ಪೊಲೀಸರು ಲಾಠಿ ಚಾರ್ಜ್ ಸಹ ನಡೆಸಿದರು. ಇನ್ನುಳಿದಂತೆ ಕುಕ್ಕೆ ಸುಬ್ರಮಣ್ಯ, ಕಡಬ ಪೇಟೆಗಳು ಸಂಪೂರ್ಣ ಬಂದ್ ಆಗಿದ್ದವು.

ಓದಿ:ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಕಠಿಣ ಕ್ರಮ: ಸಿ ಟಿ ರವಿ

Last Updated : Jul 27, 2022, 6:22 PM IST

ABOUT THE AUTHOR

...view details