ಕರ್ನಾಟಕ

karnataka

ETV Bharat / state

ಮಂಗಳೂರು ಪಾಲಿಕೆ ಚುನಾವಣೆಯಲ್ಲಿ ಅರಳಿದ ಕಮಲ, ಕಮರಿದ ಕಾಂಗ್ರೆಸ್‌ - ಲೆಟೆಸ್ಟ್ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಹಿನ್ನೆಲೆಯಲ್ಲಿ ಕಮಲ ಪಾಳೆಯದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ.

ಮಂಗಳೂರು ಮನಪಾ ಚುನಾವಣೆಯಲ್ಲಿ ಸಿಂಹ ಪಾಲು ಸ್ಥಾನ ಪಡೆದ ಬಿಜೆಪಿ: ಮುಗಿಲುಮುಟ್ಟಿದ ಕಾರ್ಯಕರ್ತರ ವಿಜಯೋತ್ಸವ

By

Published : Nov 14, 2019, 1:10 PM IST

Updated : Nov 14, 2019, 2:16 PM IST

ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಸ್ಪಷ್ಟ ಬಹುಮತ ಪಡೆದ ಬಿಜೆಪಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

ಮಂಗಳೂರು ಮನಪಾ ಚುನಾವಣೆಯಲ್ಲಿ ಸಿಂಹ ಪಾಲು ಪಡೆದ ಬಿಜೆಪಿ: ಮುಗಿಲುಮುಟ್ಟಿದ ಕಾರ್ಯಕರ್ತರ ವಿಜಯೋತ್ಸವ

ಪಾಲಿಕೆಯ 60 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನ ಗಳಿಸಿದ್ರೆ, ಕಾಂಗ್ರೆಸ್ 14 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಎಸ್​​ಡಿಪಿಐ 2 ಸ್ಥಾನ ಗಿಟ್ಟಿಸಿದೆ. ಪಾಲಿಕೆಯ ಫಲಿತಾಂಶ ಹೊರಬರ್ತಿದ್ದಂತೆ ಕಾರ್ಯಕರ್ತರು ಸಂಭ್ರಮಿಸಿದರು.

ಮಂಗಳೂರು ಮಹಾನಗರ ಪಾಲಿಕೆಗೆ ಈವರೆಗೆ ಒಟ್ಟು 7 ಬಾರಿ ಚುನಾವಣೆ ನಡೆದಿದೆ. ಇದರಲ್ಲಿ ಐದು ಬಾರಿ ‌ಕಾಂಗ್ರೆಸ್ ಅಧಿಕಾರ ವಹಿಸಿಕೊಂಡರೆ, ಬಿಜೆಪಿ ಒಂದು ಬಾರಿ ಆಡಳಿತ ಮಾಡಿತ್ತು. ಏಳನೇ ಬಾರಿ ನಡೆದ ಈ ಚುನಾವಣೆಯಲ್ಲಿ ಮತದಾರ ಪ್ರಭು ಮತ್ತೆ ಬಿಜೆಪಿಯ ಕೈ ಹಿಡಿದು ಎರಡನೇ ಬಾರಿಗೆ ಅಧಿಕಾರ ಕೊಟ್ಟಿದ್ದಾನೆ.

ಫಲಿತಾಂಶದ ಕುರಿತು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇದು ಮತದಾರರ ಗೆಲುವು. ಮುಂಬರುವ ದಿನಗಳಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

Last Updated : Nov 14, 2019, 2:16 PM IST

For All Latest Updates

ABOUT THE AUTHOR

...view details