ಕರ್ನಾಟಕ

karnataka

ETV Bharat / state

ಶಬ್ಬೀರ್ ಮೌಲಾನಾಗೆ ಪಾಸ್‍ಪೋರ್ಟ್​ ನೀಡಲು ಭಟ್ಕಳ ಪೊಲೀಸರ ಅಡ್ಡಗಾಲು?

ಶಂಕಿತ ಉಗ್ರನಾಗಿ ಜೈಲು ಸೇರಿ 2017ರಲ್ಲಿ ಬಿಡುಗಡೆಯಾಗಿದ್ದ ಭಟ್ಕಳ ತಾಲೂಕಿನ ಮುಗ್ಧಮ್ ಕಾಲೋನಿಯ ನಿವಾಸಿ ಶಬ್ಬೀರ್ ಗಂಗೊಳ್ಳಿ ಯಾನೆ ಶಬ್ಬೀರ್ ಮೌಲಾನಾಗೆ ಪಾಸ್‍ಪೋರ್ಟ್​ ನೀಡಲು ಪೊಲೀಸರು ತಡೆದಿದ್ದಾರೆ ಎನ್ನಲಾಗ್ತಿದೆ.

ಶಬ್ಬೀರ್ ಮೌಲಾನಾಗೆ ಪಾಸ್‍ಪೋರ್ಟ್​ ನೀಡಲು ಭಟ್ಕಳ ಪೊಲೀಸರ ಅಡ್ಡಗಾಲು

By

Published : Nov 19, 2019, 12:34 PM IST

ಭಟ್ಕಳ: ಶಂಕಿತ ಉಗ್ರನಾಗಿ ಜೈಲು ಸೇರಿ 2017ರಲ್ಲಿ ಬಿಡುಗಡೆಯಾಗಿದ್ದ ತಾಲೂಕಿನ ಮುಗ್ಧಮ್ ಕಾಲೋನಿಯ ನಿವಾಸಿ ಶಬ್ಬೀರ್ ಗಂಗೊಳ್ಳಿ ಯಾನೆ ಶಬ್ಬೀರ್ ಮೌಲಾನಾಗೆ ಪಾಸ್‍ಪೋರ್ಟ್​ ನೀಡಲು ಭಟ್ಕಳ ಪೊಲೀಸರು ತಡೆದಿದ್ದಾರೆ ಎನ್ನಲಾಗ್ತಿದೆ.

ಜೈಲಿನಿಂದ ಬಿಡುಗಡೆಗೊಂಡು ಒಂದೂವರೆ ವರ್ಷ ಕಳೆದ ಬಳಿಕ ವಿದೇಶದಲ್ಲಿ ಉದ್ಯೋಗ ಕಂಡುಕೊಳ್ಳಲು ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಶಬ್ಬೀರ್, ದಾಖಲಾತಿ ಪರಿಶೀಲನೆಯ ಸಂಬಂಧ ಪೊಲೀಸರ ಮುಂದೆ ಹಾಜರಾಗಿದ್ದ. ಈ ವೇಳೆ ಈತನಿಗೆ ಪಾಸ್​ಪೋರ್ಟ್​ ನೀಡಲು ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ತಿಳಿದುಬಂದಿದೆ. 2008ರಲ್ಲಿ ಖೋಟಾನೋಟು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಗಳೂರು ಉಳ್ಳಾಲದ ಮನೆಯೊಂದರ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿ ಶಬ್ಬೀರ್​ನನ್ನು ಪ್ರಕರಣದ 13ನೇ ಆರೋಪಿಯಾಗಿ ಬಂಧಿಸಿದ್ದರು.

ಭಟ್ಕಳ ಜಾಲಿ ಸಮುದ್ರ ತೀರದ ಬೆಹ್ರೀನ್ ಹೌಸ್‍ನಲ್ಲಿ ಈತ ಯುವಕರಿಗೆ ಜಿಹಾದಿ ಬೋಧನೆ ಮಾಡಿದ್ದ ಬಗ್ಗೆ ಆರೋಪ ಹೊರಿಸಲಾಗಿತ್ತು. ನಂತರ ಆತ ಪುಣೆಗೆ ಪಲಾಯನಗೈದು ತನ್ನ ಮಾವನೊಂದಿಗೆ ವಾಸವಾಗಿದ್ದ. ಅದೇ ವರ್ಷ ಡಿಸೆಂಬರ್​ನಲ್ಲಿ ಖೋಟಾ ನೋಟು ಚಲಾವಣೆಯ ಆರೋಪದ ಮೇರೆಗೆ ಪುಣೆಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು.

ಅಲ್ಲದೇ ಉಗ್ರ ಚಟುವಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಈತ ಅರೆಬಿಕ್ ಬರಹಗಳುಳ್ಳ ಕೆಲವು ಪ್ರತಿಗಳನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಖೋಟಾ ನೋಟು ಪ್ರಕರಣದಲ್ಲಿ ಪುಣೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಶಬ್ಬೀರ್ ಹೈಕೋರ್ಟ್ ಮೆಟ್ಟಿಲನ್ನು ಏರಿದ್ದನಾದರೂ ಆ ಹೊತ್ತಿಗೆ ಕೆಳ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಯ ಅವಧಿ ಮುಗಿದ ಕಾರಣ ಖೋಟಾನೋಟು ಆರೋಪದ ಸಂಬಂಧ ನ್ಯಾಯಾಲಯದ ಹೋರಾಟವನ್ನು ಅಲ್ಲಿಗೇ ನಿಲ್ಲಿಸಿ ಆತ ಮನೆಯನ್ನು ಸೇರಿಕೊಳ್ಳಲು ಆಸಕ್ತನಾಗಿದ್ದ.

ಅರೇಬಿಕ್ ಬರಹ ಪ್ರಕರಣದಲ್ಲಿ ಈತನನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿತ್ತು. ವಿಶೇಷ ಎಂದರೆ ಜೈಲಿನಲ್ಲಿದ್ದ ಅವಧಿಯಲ್ಲಿಯೇ ನಡೆದ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಮ್ ಸ್ಫೋಟ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಈತನನ್ನು ನಂತರ ನ್ಯಾಯಾಲಯ ನಿರಪರಾಧಿಯೆಂದು ಹೇಳಿತ್ತು. ಕೊನೆಯದಾಗಿ ಭಟ್ಕಳ ಜಾಲಿ ಬೀಚ್ ಜಿಹಾದಿ ಬೋಧನೆ ಪ್ರಕರಣದಲ್ಲಿಯೂ ಈತ ಆರೋಪ ಮುಕ್ತನಾಗಿ ಮನೆಗೆ ಬಂದಿದ್ದಾನೆ. ಈ ಎಲ್ಲಾ ಹಿನ್ನಲೆಯಲ್ಲಿ ಪೊಲೀಸರು ಪಾಸ್‍ಪೋರ್ಟ್​ ನೀಡುವಲ್ಲಿ ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details