ಬಂಟ್ವಾಳ(ದಕ್ಷಿಣ ಕನ್ನಡ): ತಾಲೂಕಿನ ಬಿ.ಸಿ. ರೋಡ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಗುಂಡಿಗಳಿಂದ ಕೂಡಿದ್ದು, ಶಾಶ್ವತ ಪರಿಹಾರಕ್ಕಾಗಿ ಜನರು ಒತ್ತಾಯಿಸುತ್ತಿದ್ದಾರೆ.
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳಿಂದ ಶಾಶ್ವತ ಮುಕ್ತಿಗೆ ಆಗ್ರಹ - B C Road of Bantwal Taluk
ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಗುಂಡಿಗಳಿಂದ ಕೂಡಿದ್ದು, ಶಾಶ್ವತ ಪರಿಹಾರಕ್ಕಾಗಿ ಜನರು ಒತ್ತಾಯಿಸುತ್ತಿದ್ದಾರೆ.
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಹೊಂಡಗಳಿಂದ ಶಾಶ್ವತ ಪರಿಹಾರಕ್ಕಾಗಿ ಆಗ್ರಹ
ಪ್ರತಿ ವರ್ಷ ಮಳೆಗಾಲದಲ್ಲಿ ಬಿ.ಸಿ. ರೋಡ್ನ ಅದೇ ನಿಶ್ಚಿತ ಜಾಗದಲ್ಲಿ ಗುಂಡಿಗಳು ಪ್ರತ್ಯಕ್ಷಗೊಳ್ಳುತ್ತವೆ. ನಂತರ ಸಾರ್ವಜನಿಕರ ಒತ್ತಾಯದ ಮೇರೆಗೆ ಆ ಗುಂಡಿಗಳನ್ನು ಮುಚ್ಚಲಾಗುತ್ತದೆ. ಆದರೆ ಅದರ ಅವಧಿ ಮುಂದಿನ ಮಳೆಗಾಲದವರೆಗೆ ಮಾತ್ರ. ಯಾಕಂದ್ರೆ ಮತ್ತೊಂದು ಮಳೆ ಬೀಳುತ್ತಲೇ ಗುಂಡಿಗಳು ಬಾಯ್ತೆರೆದುಕೊಳ್ಳುತ್ತವೆ.
ಮಳೆ ಹೆಚ್ಚದಾಗ ಮೇಲ್ಸೇತುವೆಯಿಂದ ನೀರು ರಸ್ತೆಗೆ ಸುರಿದು ಕೆಳಗಿದ್ದವರಿಗೆ ಅಭಿಷೇಕ ಮಾಡುವಂತೆ ಭಾಸವಾಗುತ್ತಿದೆ. ಇದಕ್ಕೆಲ್ಲ ಮೂಲ ಸಮಸ್ಯೆ ಕಂಡು ಹಿಡಿದು ಶಾಶ್ವತ ಪರಿಹಾರ ಒದಗಿಸಬೇಕಾಗಿ ಪ್ರಯಾಣಿಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.