ಬೆಳ್ತಂಗಡಿ : ನೈಟ್ ಬೀಟ್ ಕರ್ತವ್ಯದ ವೇಳೆ ಉಜಿರೆ ಜನಾರ್ದನ ದೇವಸ್ಥಾನದ ಬಳಿ ನಾಲ್ವರ ತಂಡ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು, ಜೀವ ಬೆದರಿಕೆಯೊಡ್ಡಿದ ಘಟನೆ ಸೋಮವಾರ ರಾತ್ರಿ 11.30 ರ ವೇಳೆಗೆ ನಡೆದಿದೆ.
ಬೆಳ್ತಂಗಡಿ ಠಾಣೆ ಕಾನ್ಸ್ಟೇಬಲ್ ವೆಂಕಟೇಶ್ ಸಿ.ಬಿ. ಅವರು ಈ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ. ಉಜಿರೆ ನಿವಾಸಿಗಳಾದ ಸಾಬು, ಮಂಜುನಾಥ, ಕಿರಣ ಮತ್ತು ನವೀನ ಎಂಬವರೇ ಹಲ್ಲೆ ನಡೆಸಿದವರೆಂದು ಹೆಸರಿಸಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೋಮ್‌ಗಾರ್ಡ್ ಅವರು ಸಮವಸ್ತ್ರದಲ್ಲಿ ಉಜಿರೆ ದ್ವಾರದ ಬಳಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಅಲ್ಲಿ ಸೇರಿದ ಜನರನ್ನು ಅಲ್ಲಿಂದ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಆರೋಪಿತರು ಪೊಲೀಸರನ್ನು ತುಚ್ಛವಾಗಿ ನಿಂದಿಸಿ ಕಾಲರ್ ಹಿಡಿದೆಳೆದು ಹರಿದಿರುವುದಲ್ಲದೇ, ಆರೋಪಿಗಳೆಲ್ಲರೂ ಸೇರಿ ಕೈಗಳಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಕುತ್ತಿಗೆಯನ್ನು ಹಿಡಿದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಓದಿ : ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಕಳ್ಳರ ಬಂಧನ: ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ