ಮಂಗಳೂರು: ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ರಚನೆ ಮಾಡಿರುವ ತುಳು ಲಿಪಿಯನ್ನು ಯುನಿಕೋಡ್ ನಕಾಶೆ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಂಡಿರುವುದನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅನುಮೋದಿಸಿದ್ದಾರೆ. ಈ ಬಗ್ಗೆ ಇಲಾಖೆ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪತ್ರವನ್ನು ಬರೆದಿದೆ.
ತುಳು ಲಿಪಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರ್ಪಡೆಗೊಳಿಸುವ ಕ್ರಮಕ್ಕೆ ಸಚಿವ ಲಿಂಬಾವಳಿ ಅನುಮೋದನೆ - ತುಳು
ಭಾರತೀಯ ಭಾಷಾ ಸಂಸ್ಥಾನವು ತಜ್ಞರ ಸಮಿತಿ ರಚಿಸಿ ಯುನಿಕೋಡ್ಗೆ ಸೇರಿಸುವ ಪ್ರಕ್ರಿಯೆಯನ್ನು ಶಿಫಾರಸು ಮಾಡಿದೆ. ಅಲ್ಲದೇ ತುಳು ಲಿಪಿಯು ಯೂನಿಕೋಡ್ನಲ್ಲಿ ಮೂಡುವ ಪ್ರಕ್ರಿಯೆ ಸುಗಮವಾಗಿದೆ ಎಂದು ಸಿಎಂ ಕಚೇರಿ ಅಧಿಕಾರಿ ಬೇಳೂರು ಸುದರ್ಶನ್ ಅವರೂ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಭಾರತೀಯ ಭಾಷಾ ಸಂಸ್ಥಾನವು ತಜ್ಞರ ಸಮಿತಿ ರಚಿಸಿ ಯುನಿಕೋಡ್ಗೆ ಸೇರಿಸುವ ಪ್ರಕ್ರಿಯೆಯನ್ನು ಶಿಫಾರಸು ಮಾಡಿದೆ. ಅಲ್ಲದೇ ತುಳು ಲಿಪಿಯು ಯೂನಿಕೋಡ್ನಲ್ಲಿ ಮೂಡುವ ಪ್ರಕ್ರಿಯೆ ಸುಗಮವಾಗಿದೆ ಎಂದು ಸಿಎಂ ಕಚೇರಿ ಅಧಿಕಾರಿ ಬೇಳೂರು ಸುದರ್ಶನ್ ಅವರೂ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬೆಂಬಲವಾಗಿ ನಿಂತ ಸಚಿವರು, ಅಧಿಕಾರಿಗಳು, ಅಕಾಡೆಮಿ ಹಾಗೂ ಯುನಿಕೋಡ್ ನಕಾಶೆಗೆ ತಕ್ಕಂತೆ ತುಳುಲಿಪಿ ರೂಪಿಸಿರುವ ತಜ್ಞರಿಗೂ ವಂದನೆ ತಿಳಿಸಿದ ಬೇಳೂರು ಸುದರ್ಶನ ಅವರು, ಯುನಿಕೋಡ್ ಲಿಪಿಯ ಮೂಲಕ ತುಳು ಇನ್ನಷ್ಟು ಜನಪ್ರಿಯವಾಗಲಿ. ಡಿಜಿಟಲ್ ವೇದಿಕೆಗಳಲ್ಲಿ ತುಳು ಇನ್ನಷ್ಟು ಕಂಡು ಬರಲಿ ಎಂದು ಹಾರೈಸಿದ್ದಾರೆ.