ಬೆಳ್ತಂಗಡಿ: ತಾಲೂಕಿನ ಗಂಡಿಬಾಗಿಲು ಸಮೀಪ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಪತಿ ಹೊಡೆದು ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಸೌಮ್ಯ ಫ್ರಾನ್ಸಿಸ್ (40) ಕೊಲೆಯಾಗಿದ್ದು, ಈಕೆಯ ಪತಿ ಜಾನ್ಸನ್ (47) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೂಲತಃ ಕೇರಳದ ಇರುಟ್ಟಿ ನಿವಾಸಿಗಳಾಗಿದ್ದು, ಗಂಡಿ ಬಾಗಿಲು ಸಮೀಪ ಜಮೀನು ಹೊಂದಿದ್ದರು. ಇಬ್ಬರು ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ಪತಿ - ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು. ಗುರುವಾರ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಜಾನ್ಸನ್ ಮರದ ತುಂಡಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.