ಮಂಗಳೂರು: ಇಂದು ಬೆಳಗ್ಗೆ ನಗರದ ಮೆಸ್ಕಾಂ ಅಧಿಕಾರಿಯ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದಯಾಲು ಸುಂದರ್ ರಾಜ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ನಗರದ ಮಲ್ಲಿಕಟ್ಟೆ ಸಮೀಪ ಬಾಡಿಗೆಗೆ ವಾಸವಾಗಿರುವ ವಿಜಯ ಅಪಾರ್ಟ್ಮೆಂಟ್ ಹಾಗೂ ಮೆಸ್ಕಾಂ ಕಚೇರಿ ಮೇಲೂ ದಾಳಿ ಮಾಡಲಾಗಿದೆ. ಎಸ್ಪಿ ಸಿ.ಎ.ಸೈಮನ್ ಹಾಗೂ ಕಾರವಾರ ಎಸಿಬಿ ನೇತೃತ್ವದ ತಂಡ ದಾಳಿ ನಡೆಸಿದೆ.