ಕರ್ನಾಟಕ

karnataka

ETV Bharat / state

ಪದವಿ ಓದಿದರೂ ಸಿಗದ ಕೆಲಸ: ಮನನೊಂದು ಯುವತಿ ಆತ್ಮಹತ್ಯೆ - suicide for not getting job

ಎಮ್​​ಕಾಂ ಪದವೀಧರೆಯಾಗಿದ್ರೂ ಅರ್ಹತೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂದು ಮನನೊಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ನಡೆದಿದೆ.

ಮನನೊಂದು ಯುವತಿ ಆತ್ಮಹತ್ಯೆ
ಮನನೊಂದು ಯುವತಿ ಆತ್ಮಹತ್ಯೆ

By

Published : Sep 23, 2020, 8:37 PM IST

ಕಡಬ (ದಕ್ಷಿಣ ಕನ್ನಡ):ಪದವಿ ಶಿಕ್ಷಣ ಪಡೆದರೂ ಸರಿಯಾದ ಉದ್ಯೋಗ ಲಭಿಸದ ಹಿನ್ನೆಲೆ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಬುಧವಾರ ನಡೆದಿದೆ.

ಪರಂಗಾಜೆ ಬಾಬು ಗೌಡ ಎಂಬುವವರ ಪುತ್ರಿ ಭವ್ಯ ಪಿ.ಬಿ (27) ಅತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಎಮ್​​ಕಾಂ ಪದವೀಧರೆಯಾಗಿದ್ದು, ತನ್ನ ಅರ್ಹತೆಗೆ ತಕ್ಕದಾದ ಉದ್ಯೋಗ ಸಿಕ್ಕಿಲ್ಲ ಎನ್ನಲಾಗಿದ್ದು, ಹಲವು ಬಾರಿ ಉದ್ಯೋಗಕ್ಕೆ ಪ್ರಯತ್ನಿಸಿ ವಿಫಲರಾಗಿದ್ದರು.

ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯೊಳಗಿನ ಫ್ಯಾನ್​​ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈಕೆಯ ಸಹೋದರ ಉಮೇಶ್ ಎಂಬುವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details