ಕರ್ನಾಟಕ

karnataka

ETV Bharat / state

ಗಂಡನನ್ನು ಹುಡುಕಿ ಕೊಡಿ: ಮತಾಂತರಗೊಂಡ ಆಸಿಯಾ ಅಳಲು

ಆಸಿಯಾ ಎಂಬ ಮಹಿಳೆಯಿಂದ ಅವರ ಗಂಡ ದೂರವಾಗಿದ್ದು, ತನ್ನ ಪತಿಯನ್ನು ಹುಡುಕಿಕೊಡುವಂತೆ ಮಾಧ್ಯಮದ ನೆರವು ಕೋರಿದ್ದಾರೆ.

ಮತಾಂತರಗೊಂಡ ಆಸಿಯಾ ಅಳಲು
women request to media

By

Published : Nov 25, 2020, 8:30 PM IST

Updated : Nov 26, 2020, 2:32 PM IST

ಮಂಗಳೂರು:ಫೇಸ್​ಬುಕ್​ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ವಿವಾಹವಾಗಲು ಶಾಂತಿ ಜೂಬಿ ಅಲಿಯಾಸ್ ಆಸಿಯಾ ಎಂಬ ಮಹಿಳೆಯೂ ತನ್ನ ಧರ್ಮದಿಂದ ಮತಾಂತರಗೊಂಡಿದ್ದರು. ಆದರೀಗ ಆಕೆಯ ಗಂಡ ದೂರವಾಗಿದ್ದು, ಪತಿಯನ್ನು ಹುಡುಕಿಕೊಡುವಂತೆ ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮತಾಂತರಗೊಂಡ ಆಸಿಯಾ ಅಳಲು

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದು, ಕೇರಳದ ಕಣ್ಣೂರು ಗ್ರಾಮದ ಪ್ರಸಿದ್ಧ ತೀಯ ಕುಟುಂಬದಲ್ಲಿ ನನಗೆ ಈ ಹಿಂದೆ ಮದುವೆಯಾಗಿತ್ತು. ಬಳಿಕ ಫೇಸ್ ಬುಕ್ ಮೂಲಕ ಪರಿಚಿತನಾದ ದ.ಕ.ಜಿಲ್ಲೆಯ ಸುಳ್ಯದ ಕಟ್ಟೆಕಾರ್ ಎಂಬಲ್ಲಿನ ಇಬ್ರಾಹಿಂ ಖಲೀಲ್ ಕಟ್ಟೆಕಾರ್​ನ ಅವರನ್ನು ಪ್ರೀತಿಸತೊಡಗಿದೆ. ಇದರಿಂದ ನಾನು ಮೊದಲ ಹಿಂದೂ ಗಂಡನಿಂದ ವಿಚ್ಛೇದನ ಪಡೆದು ಈತನನ್ನು ಮದುವೆಯಾಗಲು ಒಪ್ಪಿದೆ‌. ಇದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ಮುಸ್ಲಿಂ ಆಚಾರ-ವಿಚಾರಗಳನ್ನು ಕಲಿತುಕೊಂಡೆನು. ಬಳಿಕ ನನ್ನನ್ನು ಇಬ್ರಾಹಿಂ ಖಲೀಲ್ ಕಟ್ಟೆಕಾರ್ 2017 ಜುಲೈ 12ರಂದು ಬೆಂಗಳೂರಿನ ಮಸೀದಿಯೊಂದರಲ್ಲಿ ಇಸ್ಲಾಂ ಕಾನೂನಿನಂತೆ ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ (ನಿಖಾಹ್)ಯಾದರು.

ವಿವಾಹವಾಗಿ 2020 ಜನವರಿ 15ರವರೆಗೆ ನಮ್ಮ ಸಂಸಾರ ಚೆನ್ನಾಗಿ ನಡೆಯಿತು. ಜ.16ರ ಬಳಿಕ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಅವರ ಅಣ್ಣ ಶಿಹಾಬ್ ಕಟ್ಟೆಕಾರ್​ನಿಂದಾಗಿ ನಮ್ಮಿಬ್ಬರ ನಡುವೆ ಸಂಪರ್ಕ ಕಡಿದು ಹೋಗಿದೆ. ಇಬ್ರಾಹಿಂ ಖಲೀಲ್ ಕಟ್ಟೆಕಾರ್ ತಂಗಿ ಮದುವೆಯಾಗುವವರೆಗೆ ಜಗತ್ತಿಗೆ ನಮ್ಮ ಮದುವೆ ವಿಚಾರ ಗೌಪ್ಯವಾಗಿ ಇಡಬೇಕೆಂದು ಹೇಳಿದ್ದರು. ಆದರೆ ಅವರ ಮನೆಯಲ್ಲಿ ಎಲ್ಲರಿಗೂ ಈ ವಿಚಾರ ತಿಳಿದಿತ್ತು. ನನ್ನ ಮನೆಯವರಿಗೂ ನಾನು ಮತಾಂತರಗೊಂಡು ವಿವಾಹವಾದ ವಿಚಾರ ಹೇಳಿರಲಿಲ್ಲ. ಅವರಿಗೆ ಗೊತ್ತಾದ ಬಳಿಕ ನನ್ನನ್ನು ಮನೆಯವರು ಸಂಪೂರ್ಣ ದೂರ ಇಟ್ಟಿದ್ದಾರೆ‌. ನಾನು ನನ್ನ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ ತೊರೆಯಬೇಕಾಯಿತು. ನಾನು ನನ್ನ ಆಸ್ತಿಯನ್ನೆಲ್ಲಾ ತೊರೆದ ಬಳಿಕವೇ ಈಗಿನ ಈ ಸಮಸ್ಯೆ ಆರಂಭವಾಗಿದೆ ಎಂದರು.

ಜ.16ರ ಬಳಿಕ ಇಬ್ರಾಹಿಂ ಖಲೀಲ್ ಅವರು ನನ್ನ ಸಂಪರ್ಕದಿಂದ ತಪ್ಪಿದ್ದು, ನಾನು ಫೆ.14ಕ್ಕೆ ಸುಳ್ಯದ ಮನೆಗೆ ಇಬ್ರಾಹಿಂ ನನ್ನು ಹುಡುಕಿಕೊಂಡು ಬಂದೆ. ಆಗ ಅವರ ಅಣ್ಣ ಶಿಹಾಬ್ ಇಬ್ರಾಹಿಂ ಖಲೀಲ್ ಇಲ್ಲ. ಮತ್ತೆ ಯಾಕೆ ನೀನು ಇಲ್ಲಿಗೆ ಬಂದೆ?. ನಿಮ್ಮಿಬ್ಬರನ್ನು ಒಂದಾಗಿ ಇರಲು ಬಿಡೋದಿಲ್ಲ ಎಂದು ಹೇಳಿದರು. ಆ ಬಳಿಕ ಯಾರದೋ ಮನೆಗೆ ನನ್ನನ್ನು ಕರೆದೊಯ್ದು, ಮೂರು ದಿನಗಳೊಳಗೆ ಇಬ್ರಾಹಿಂ ಬಳಿ ಸೇರಿಸುತ್ತೇವೆ. ಇಲ್ಲಿ ಯಾರಿಗೂ ಈ ವಿಚಾರ ತಿಳಿಸಬೇಡ ಎಂದು ಸಬೂಬು ಹೇಳಿದರು.

ಈ ಕುರಿತಂತೆ ನಾನು ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿದ್ದು, ಪೊಲೀಸರು ಸಂದಾನ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಷ್ಟಕ್ಕೆ ಬಿಡದೆ ನಾನು ಜಮಾತ್​ಗೂ ಪತ್ರ ಬರೆದೆ. ಆದರೆ ಈವರೆಗೆ ಅವರಿಂದ ಯಾವ ಉತ್ತರವೂ ಬಂದಿಲ್ಲ. ಮೂರು ತಿಂಗಳಾಯ್ತು ಈ ಸಮಸ್ಯೆಗೆ ಯಾವುದೇ ಪರಿಹಾರ ಇನ್ನೂ ದೊರಕಿಲ್ಲ. ಇನ್ನು ಮುಂದಕ್ಕೆ ಇದರ ವಿರುದ್ಧ ಹೋರಾಡಲು ಶಕ್ತಿ ಇಲ್ಲ. ಇದು ನನ್ನ ಕೊನೆಯ ಹೋರಾಟವೆಂದು ಮಾಧ್ಯಮದ ಮುಂದೆ ಬಂದಿದ್ದೇನೆ. ಇಲ್ಲಾದರೂ ನನ್ನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದರು.

Last Updated : Nov 26, 2020, 2:32 PM IST

ABOUT THE AUTHOR

...view details