ಬಂಟ್ವಾಳ(ದ.ಕನ್ನಡ): ಸ್ಕೂಟರ್ ಚಲಾಯಿಸುವಾಗ ನಿಯಂತ್ರಣ ಕಳೆದುಕೊಂಡಿರುವ ಮಹಿಳೆ ರಸ್ತೆ ತಿರುವಿನಲ್ಲಿ ಸುಮಾರು 20 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉಕ್ಕುಡ ನಿವಾಸಿ ಮೋಹಿನಿ ಎಂಬವವರು ಎರಡು ದಿನಗಳ ಹಿಂದೆ ಬೆಳಗ್ಗೆ ಸುಮಾರು 6.30ಕ್ಕೆ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೋ ಒಂದು ದ್ವಿಚಕ್ರ ವಾಹನ ಅವರನ್ನು ಕಾಶಿಮಠ ತಿರುವಿನಲ್ಲಿ ಓವರ್ ಟೇಕ್ ಮಾಡಿದೆ. ಈ ಸಂದರ್ಭ ವಾಹನದ ನಿಯಂತ್ರಣ ಕಳೆದುಕೊಂಡ ಅವರು ಪಕ್ಕದಲ್ಲಿಯೇ ಇದ್ದ ಪ್ರಪಾತಕ್ಕೆ ಬಿದ್ದರು.
20 ಅಡಿ ಆಳಕ್ಕೆ ಸ್ಕೂಟರ್ ಸಮೇತ ಬಿದ್ದ ಮಹಿಳೆ - ಪ್ರಾಣ ಉಳಿಸಿದ ಪ್ರಯಾಣಿಕರು! ಅದೇ ಹೊತ್ತಿನಲ್ಲಿ ಇತರೆ ವಾಹನಗಳು ಓಡಾಡುತ್ತಿದ್ದ ಕಾರಣ, ಈ ಘಟನೆಯನ್ನು ಪ್ರಯಾಣಿಕರು ಗಮನಿಸಿದ್ದಾರೆ. ತಕ್ಷಣ ವಾಹನಗಳನ್ನು ನಿಲ್ಲಿಸಿದ ಅವರು ಮಹಿಳೆಯನ್ನು ರಕ್ಷಿಸಿದ್ದಾರೆ. ಒಂದು ವೇಳೆ ಘಟನೆ ನಡೆಯುವ ಸಂದರ್ಭ ಯಾರೂ ಇರದೇ ಇದ್ದರೆ, ಮಹಿಳೆಯ ಜೀವಕ್ಕೆ ಅಪಾಯವಿತ್ತು.
ಇದನ್ನೂ ಓದಿ:ಕೊರೊನಾದಿಂದ ಸಿಎಂ ಬಿಎಸ್ವೈ ಗುಣಮುಖ: ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್
ವಿಟ್ಲದ ಕಾಶಿಮಠದಲ್ಲಿ ಅಪಾಯಕಾರಿ ತಿರುವು ಇದ್ದು, ಪಕ್ಕದಲ್ಲೇ ಆಳವಾದ ಹೊಂಡ ಇದೆ. ವಾಹನ ಸವಾರರು ರಸ್ತೆಯಂಚಿಗೆ ಹೋದರೆ, ಹೊಂಡಕ್ಕೆ ಬೀಳುವ ಸಾಧ್ಯತೆ ಜಾಸ್ತಿ.