ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಜ್ಯುವೆಲ್ಲರಿಗೆ ಕನ್ನ ಹಾಕಿದ ಖದೀಮರು... ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು - etv bharat

ಹಬ್ಬಗಳೆಂದ್ರೇ ಕಳ್ಳರಿಗೆ ಅದ್ಯಾಕೋ ಸುದಿನ ಅನ್ಸುತ್ತೆ.. ಕನ್ನ ಹಾಕಲು ಕಾಯ್ತಿರ್ತಾರೆ. ಮಂಗಳೂರು ನಗರದಲ್ಲಿ ನಿನ್ನೆ ಗಣೇಶ ಹಬ್ಬದ ಸಂಭ್ರಮವಿತ್ತು. ಸರಿಯಾದ ಸಮಯಕ್ಕೆ ಕಾದಿದ್ದ ಕಳ್ಳರು ಜ್ಯುವೆಲ್ಲರಿ ಶಾಪ್​ಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಜ್ಯುವೆಲ್ಲರಿಗೆ ಕನ್ನ

By

Published : Sep 3, 2019, 4:26 PM IST

Updated : Sep 3, 2019, 4:51 PM IST

ಮಂಗಳೂರು: ನಗರದ ಜ್ಯುವೆಲ್ಲರಿಯೊಂದಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಗರದ ಭವಂತಿ ರಸ್ತೆಯಲ್ಲಿ ನಡೆದಿದೆ. ‌

ಅನಿಲ್ ಶೇಟ್ ಎಂಬುವರ ಜ್ಯುವೆಲ್ಲರಿಗೆ ಖದೀಮರು ಕನ್ನ ಹಾಕಿದ್ದಾರೆ. ಜ್ಯುವೆಲ್ಲರ್​ನ ಹಿಂಭಾಗದ ಗೋಡೆಯಲ್ಲಿ ಎರಡು‌ ಅಡಿ ಚೌಕ ಅಳತೆಯಲ್ಲಿ ಗೋಡೆ ಕೊರೆದು ಅಂಗಡಿಯ ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.

ಗೋಡೆ ಕೊರೆದು ಚಿನ್ನಾಭರಣ ಅಂಗಡಿಗೆ ಕನ್ನ

ಒಳ ಪ್ರವೇಶಿಸಿದ ಕಳ್ಳರು ಕಬ್ಬಿಣದ ಬಾಕ್ಸ್​ವೊಂದರಲ್ಲಿ ಚಿನ್ನಾಭರಣವಿರಿಸಿದ್ದ ಸಣ್ಣ ಬಾಕ್ಸ್ ತೆರೆದು ಕಳವು ಮಾಡಿದ್ದಾರೆ. ಬಳಿಕ ಬಾಕ್ಸ್​ಗಳ ಕವರ್​ಗಳನ್ನು ಮಳಿಗೆಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸೋಮವಾರ ಅಂಗಡಿ ಬಂದ್ ಆಗಿತ್ತು. ಇಂದು ಬೆಳಗ್ಗೆ ಮಳಿಗೆಯ ಬಾಗಿಲು ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 3, 2019, 4:51 PM IST

ABOUT THE AUTHOR

...view details