ಕರ್ನಾಟಕ

karnataka

ETV Bharat / state

ರಿಕ್ಷಾದಲ್ಲಿ ಬಂದು ಇಬ್ಬರನ್ನು ದರೋಡೆಗೈದ ಪ್ರಕರಣ: ಇಬ್ಬರು ವಶಕ್ಕೆ - police arrested two people

ರಿಕ್ಷಾದಲ್ಲಿ ಬಂದು ಇಬ್ಬರನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೋಡಿ ಮತ್ತು ಮಾಸ್ತಿಕಟ್ಟೆ ನಿವಾಸಿಗಳಾದ ಮಹಮ್ಮದ್ ತೌಸೀಫ್ ಮತ್ತು ಸೈಫುದ್ದೀನ್ ಬಂಧಿತರು. ಈ ಕುರಿತು ಉಳ್ಳಾಲ ಬಂದರು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ

By

Published : Dec 28, 2020, 2:21 PM IST

ಉಳ್ಳಾಲ: ಮಂಗಳೂರು ಮತ್ತು ಉಳ್ಳಾಲ ಭಾಗದಲ್ಲಿ ರಿಕ್ಷಾದಲ್ಲಿ ಬಂದು ಇಬ್ಬರನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ರಿಕ್ಷಾ ಚಾಲಕ ಸೇರಿದಂತೆ ಇಬ್ಬರನ್ನು ಘಟನೆ ನಡೆದ ಒಂದು ದಿನದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ಕೋಡಿ ಮತ್ತು ಮಾಸ್ತಿಕಟ್ಟೆ ನಿವಾಸಿಗಳಾದ ಮಹಮ್ಮದ್ ತೌಸೀಫ್ ಮತ್ತು ಸೈಫುದ್ದೀನ್ ಬಂಧಿತರು. ಡಿ. 25 ರಂದು ಮಂಗಳೂರಿನ ಬಂದರು ಠಾಣಾ ವ್ಯಾಪ್ತಿಯ ಬೀಬಿ ಅಲಾಬಿ ರಸ್ತೆಯಲ್ಲಿ ಪ್ರಭುದೇವ ಎಂಬುವರು ಮನೆಯಿಂದ ಹೊರಬಂದು ಮೊಬೈಲ್​​ನಲ್ಲಿ ಮಾತನಾಡುತ್ತಿದ್ದ ಸಂದರ್ಭ, ರಿಕ್ಷಾದಲ್ಲಿ ಬಂದ ಇಬ್ಬರು ದೊಣ್ಣೆಯಿಂದ ತಲೆಗೆ ಬಡಿದು ಮೊಬೈಲ್​ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳು ಅದೇ ದಿನ ರಾತ್ರಿ ತೊಕ್ಕೊಟ್ಟಿನಿಂದ ಬಾಡಿಗೆ ನೆಪದಲ್ಲಿ ಜಾಫರ್ ಎಂಬುವವರನ್ನು ಕರೆದೊಯ್ದು, ಉಳ್ಳಾಲದ ಭಗವತಿ ದೇವಸ್ಥಾನದ ರಸ್ತೆ ಬಳಿ ಇಳಿಸಿ ದೊಣ್ಣೆಯಿಂದ ಹೊಡೆದು ಆತನಲ್ಲಿರುವ ಚಿನ್ನ, ಮೊಬೈಲ್ ಹಾಗೂ ನಗದು ಕಳವು ಮಾಡಿದ್ದಾರೆ.

ಓದಿ:ಗ್ರಾಪಂ ಚುನಾವಣೆಗೆ ಬೆಳ್ತಂಗಡಿಯಲ್ಲಿ ಉತ್ತಮ ಪ್ರತಿಕ್ರಿಯೆ.. ಡಾ.ಹೆಗ್ಗಡೆಯವರು ಸೇರಿದಂತೆ ಗಣ್ಯರಿಂದ ಮತ ಚಲಾವಣೆ

ಈ ಕುರಿತು ಉಳ್ಳಾಲ ಬಂದರು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಉಳ್ಳಾಲ ಪೊಲೀಸರು ಒಂದು ದಿನದೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಾಧಿಕಾರಿ ಸಂದೀಪ್ ಕುಮಾರ್ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್​ಐ ಶಿವಕುಮಾರ್ ಮತ್ತು ತಂಡ ಭಾಗಿಯಾಗಿತ್ತು.

ABOUT THE AUTHOR

...view details