ಮಂಗಳೂರು:ನಗರದ ಬೆಂದೂರ್ ವೆಲ್ಕುಮಾರ್ ಇಂಟರ್ ನ್ಯಾಷನಲ್ ಲಾಡ್ಜ್ನಲ್ಲಿ ಜೂಜಾಟ ಆಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜೂಜಾಟದಲ್ಲಿ ನಿರತರಾಗಿದ್ದ 8 ಮಂದಿ ಅರೆಸ್ಟ್: ನಗದು ಸಹಿತ ಕಾರು,ದ್ವಿಚಕ್ರ ವಾಹನ ವಶ! - involved in gambling
ಮಂಗಳೂರು ನಗರದ ಖಾಸಗಿ ಲಾಡ್ಜ್ವೊಂದರಲ್ಲಿ ಜೂಜಾಟವಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಖಚಿತ ಮಾಹಿತಿ ಪಡೆದು ಬಂಧಿಸಿದ್ದು, ನಗದು ಸೇರಿ ಕಾರು, ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಕಲ್ಕರ ಹೌಸ್ ನಿವಾಸಿ ಪ್ರವೀಣ್(41), ಪೆರ್ಮನ್ನೂರು ಗ್ರಾಮದ ನಿವಾಸಿ ನವೀನ್ (35), ತಲಪಾಡಿಯ ಪಂಜರ ಹೌಸ್ ನಿವಾಸಿ ನವೀನ್ ಆಳ್ವ (39), ಸೂಪಿಕಾನದ ಹಳೆಕಳ ಹೌಸ್ ನಿವಾಸಿ ಬಶೀರ್(52), ಕಂಡೇವ್ ಹೌಸ್ ನ ಸತೀಶ(33), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಹೌಸ್ ನಿವಾಸಿ ವಿಜಯ ಕುಮಾರ್ (38), ಉಳ್ಳಾಲ ಮಾಸ್ತಿಕಟ್ಟೆಯ ಸುಂದರಿಭಾಗ್ ನಿವಾಸಿ ಭಾಸ್ಕರ (45), ಮರೋಳಿ ಗ್ರಾಮದ ನಿವಾಸಿ ಆಕಾಶ್ (31) ಬಂಧಿತ ಆರೋಪಿಗಳು.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, 49,340 ರೂ. ನಗದು, 1 ಬೊಲೆರೊ ಕಾರು, 3 ದ್ವಿಚಕ್ರ ವಾಹನ ಹಾಗೂ 10 ಮೊಬೈಲ್ ಫೋನ್ ಹಾಗೂ ಜುಗಾರಿ ಆಟ ಆಡಲು ಉಪಯೋಗಿಸಿದ ವಸ್ತುಗಳನ್ನ ವಶ ಪಡಿಸಿಕೊಂಡಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.