ಕರ್ನಾಟಕ

karnataka

ETV Bharat / state

ದ‌.ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 6 ಬಲಿ: 132 ಮಂದಿ‌ಗೆ ಸೋಂಕು ದೃಢ! - New corona case

ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿರುವ ಕೊರೊನಾ ಸೋಂಕು ಇಂದು 6 ಜನರನ್ನು ಬಲಿ ತೆಗೆದುಕೊಂಡಿದೆ. 132 ಮಂದಿಗೆ ಸೋಂಕು ದೃಢಪಟ್ಟಿದೆ.

Dakshina Kannada corona case
Dakshina Kannada corona case

By

Published : Aug 9, 2020, 8:11 PM IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ‌ ಮೂಲಕ‌ ಮೃತಪಟ್ಟವರ ಸಂಖ್ಯೆ 220ಕ್ಕೇರಿದೆ.

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಇಂದು 132 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಂಗಳೂರಲ್ಲಿ 81 ಮಂದಿಯಲ್ಲಿ ಸೋಂಕು‌ ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ‌ 22, ಬೆಳ್ತಂಗಡಿಯಲ್ಲಿ 4, ಪುತ್ತೂರಿನಲ್ಲಿ 6, ಸುಳ್ಯದಲ್ಲಿ 3 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಹೊರ ಜಿಲ್ಲೆಯಿಂದ ಬಂದಿರುವ 16 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಐಎಲ್​ಐ‌ ಪ್ರಕರಣದಲ್ಲಿ 68 ಮಂದಿಗೆ ಇಂದು ಸೋಂಕು ತಗುಲಿದ್ದರೆ, ಎಸ್​ಎಆರ್​ಐ ಪ್ರಕರಣದಲ್ಲಿ 11 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 21 ಮಂದಿಗೆ ಸೋಂಕು ತಗುಲಿದೆ. 32 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

195 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 7,207 ಸೋಂಕಿತರ ಪೈಕಿ 3,682 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 3,305 ಸೋಂಕಿತ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details