ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಐವರು ಮೃತಪಟ್ಟಿದ್ದು, 401 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿಯ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ: ಕೋವಿಡ್ಗೆ 5 ಸಾವು, 401 ಪಾಸಿಟಿವ್ ದೃಢ - corona positive case
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 401 ಜನರಿಗೆ ಸೋಂಕು ತಗುಲಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮೃತರಲ್ಲಿ ಮೂವರು ಮಂಗಳೂರು ತಾಲೂಕು, ಒಬ್ಬರು ಸುಳ್ಯ ತಾಲೂಕು, ಮತ್ತೊಬ್ಬರು ಹೊರ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 439ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಇನ್ನು ಸೋಂಕು ದೃಢಪಟ್ಟವರಲ್ಲಿ 227 ಮಂಗಳೂರು ತಾಲೂಕು, 47 ಬಂಟ್ವಾಳ ತಾಲೂಕು, 52 ಪುತ್ತೂರು ತಾಲೂಕು, 30 ಸುಳ್ಯ ತಾಲೂಕು, 24 ಬೆಳ್ತಂಗಡಿ ತಾಲೂಕು ಮತ್ತು 21 ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 16,959 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನು 401 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 12,813 ಮಂದಿ ಗುಣಮುಖರಾಗಿ ಮನೆಗೆ ಮಾರಳಿದ್ದಾರೆ. 3707 ಸಕ್ರಿಯ ಪ್ರಕರಣಗಳು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.