ಕರ್ನಾಟಕ

karnataka

ETV Bharat / state

ದ.ಕ.ದಲ್ಲಿ ಇಂದು 350 ಜನರಿಗೆ ಕೊರೊನಾ ಪಾಸಿಟಿವ್: 9 ಸಾವು - corona latest news

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 350 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 9 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿಯ ಮಾಹಿತಿ ನೀಡಿದೆ.

350-corona-positive-cases-in-dakshina-kannada
ದ.ಕ.ದಲ್ಲಿ ಇಂದು 350 ಜನರಿಗೆ ಕೊರೊನಾ ಪಾಸಿಟಿವ್

By

Published : Sep 10, 2020, 10:33 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು 9 ಜನರು ಸಾವನ್ನಪ್ಪಿದ್ದು, 350 ಜನರಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ದ.ಕ.ದಲ್ಲಿ ಇಂದು 350 ಜನರಿಗೆ ಕೊರೊನಾ ಪಾಸಿಟಿವ್

ಕೊರೊನಾದಿಂದ ಸಾವನ್ನಪ್ಪಿದ 9 ಜನರಲ್ಲಿ ಐವರು ಮಂಗಳೂರು ತಾಲೂಕು, ಒಬ್ಬರು ಬಂಟ್ವಾಳ ತಾಲೂಕು, ಇಬ್ಬರು ಬೆಳ್ತಂಗಡಿ ತಾಲೂಕು ಹಾಗೂ ಒಬ್ಬರು ಹೊರ ಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ154 ಮಂದಿ ಮಂಗಳೂರು ತಾಲೂಕು, 56 ಮಂದಿ ಬಂಟ್ವಾಳ ತಾಲೂಕು, 26 ಮಂದಿ ಪುತ್ತೂರು ತಾಲೂಕು, 13 ಮಂದಿ ಸುಳ್ಯ ತಾಲೂಕು, 48 ಮಂದಿ ಬೆಳ್ತಂಗಡಿ ತಾಲೂಕು ಮತ್ತು 53 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ ಎಂದು ಮಾಹಿತಿ ನೀಡಲಾಯಿತು.

ಜಿಲ್ಲೆಯಲ್ಲಿ ಈವರೆಗೆ 16,112 ಜನರಿಗೆ ಕೊರೊನಾ ದೃಢಪಟ್ಟಿದೆ. ಇಂದು 170 ಜನರು ಗುಣಮುಖರಾಗಿದ್ದು, ಈವರೆಗೆ 12,412 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳು 3,273 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details