ಮಂಗಳೂರು: ಸುರತ್ಕಲ್ ಸಮೀಪದ ಚೇಳೈರು ಎಮ್ಆರ್ಪಿಎಲ್ ಕಾಲೋನಿಯ ಬಾಣಂತಿಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಚೇಳೈರು: ತಲೆ ತಿರುಗಿ ಬಿದ್ದು ಬಾಣಂತಿ ಸಾವು, ಬಡಪಾಯಿಯಾದ 19 ದಿನದ ಮಗು
19 ದಿನಗಳ ಹಿಂದೆ ಮಗುವೊಂದಕ್ಕೆ ಜನ್ಮ ನೀಡಿದ್ದ ಬಾಣಂತಿಯೊಬ್ಬರುದ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾರೆ.
ಬಾಣಂತಿ ಯುವತಿ ಸಾವು
ಲಿಖಿತಾ(24) ಮೃತಪಟ್ಟವರು. 19 ದಿನಗಳ ಹಿಂದೆ ಮಗುವೊಂದಕ್ಕೆ ಜನ್ಮ ನೀಡಿದ್ದ ಅವರು ಆರೈಕೆಯಲ್ಲಿದ್ದರು. ಮಂಗಳವಾರ ಶೌಚಾಲಯಕ್ಕೆ ತೆರಳಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Apr 15, 2020, 1:07 PM IST