ಮಂಗಳೂರು:ಇಲ್ಲಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ಗೆ ಸರಕು ಸಾಗಣೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ ದುರಂತಕ್ಕೀಡಾಗಿದ್ದು, ಮೂವರು ಮೀನುಗಾರರು ಸಾವಿಗೀಡಾದರೆ, ಈವರೆಗೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಕಣ್ಮರೆಯಾಗಿರುವ 9 ಮೀನುಗಾರರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಕೇರಳದಿಂದ ಮೀನುಗಾರಿಕೆ ನಡೆಸುತ್ತಾ ಬಂದ ಮೀನುಗಾರಿಕಾ ಬೋಟ್ ಮಂಗಳೂರು ಸಮೀಪ ದುರಂತಕ್ಕೀಡಾಗಿದೆ. ನವ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು ಇದರಲ್ಲಿ 14 ಮೀನುಗಾರರು ಇದ್ದರು.