ಕರ್ನಾಟಕ

karnataka

ETV Bharat / state

ಕ್ಯಾನ್ಸರ್‌ಪೀಡಿತರಿಗಾಗಿ 3 ವರ್ಷದಿಂದ ಬೆಳೆಸಿದ ತಲೆಕೂದಲು ದಾನ ಮಾಡಿದ ಬಾಲಕ - ಕ್ಯಾನ್ಸರ್‌

ದಕ್ಷಿಣ ಕನ್ನಡ ಜಿಲ್ಲೆಯ ಬಾಲಕ ತನ್ನ ತಲೆಕೂದಲನ್ನು ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡಿ ಮಾದರಿಯಾಗಿದ್ದಾನೆ.

Hair donater Ratish C
ಕೇಶದಾನಿ ರತೀಶ್‌ ಸಿ

By

Published : Jun 2, 2023, 10:22 AM IST

ಸುಳ್ಯ (ದಕ್ಷಿಣ ಕನ್ನಡ):ಬಾಲಕನೊಬ್ಬ ತಾನು ಮೂರು ವರ್ಷಗಳಿಂದ ಬೆಳೆಸಿದ ತಲೆಕೂದಲನ್ನು ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ. ಸುಳ್ಯ ಹಾಗೂ ಕಾಸರಗೋಡು ತಾಲೂಕಿನ ಗಡಿಭಾಗದಲ್ಲಿರುವ ಅಡೂರು ಗ್ರಾಮದ ಮಣಿಯೂರಿನ ನಿವಾಸಿಗಳಾದ ನವೀನ್‌ ರಾವ್‌ ಸಿಂಧ್ಯಾ ಹಾಗೂ ಭವಾನಿ ದಂಪತಿಯ ಹನ್ನೊಂದು ವರ್ಷ ಪ್ರಾಯದ ಪುತ್ರ ರತೀಶ್‌ ಸಿ. ಕೇಶದಾನ ಮಾಡಿರುವ ಬಾಲಕ.

ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿದ್ದಾಗಲೇ ಈತ ತನ್ನ ಕೂದಲನ್ನು ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡಬೇಕು ಎನ್ನುವ ಸಂಕಲ್ಪ ಕೈಗೊಂಡಿದ್ದನು. ಆಗ ಕೇವಲ 8 ವರ್ಷ ಪ್ರಾಯವಿತ್ತು. ಹೆತ್ತವರು ಮಗನ ಇಚ್ಛೆಗೆ ಒಪ್ಪಿಗೆ ಕೊಟ್ಟಿದ್ದರು.

ಕೇಶದಾನಿ ರತೀಶ್‌ ಸಿ

ನಂತರ ಮೂರು ವರ್ಷಗಳ ಕಾಲ ಕೂದಲು ಬೆಳೆಸಲು ಪ್ರಾರಂಭಿಸಿದ್ದಾನೆ. ಹೀಗೆ ಬೆಳೆಸಿದ ಕೂದಲನ್ನು ಕತ್ತರಿಸಿ ಇದೀಗ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಉದಯ ಭಾಸ್ಕರ್‌ ಅವರ ಮೂಲಕ ಕ್ಯಾನ್ಸರ್‌ ಪೀಡಿತರಿಗೆ ಹಸ್ತಾಂತರಿಸಿದ್ದಾನೆ. ರತೀಶ್‌ ಪ್ರಸ್ತುತ ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಗಜಾನನ ಶಾಲೆಯಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಕ್ಯಾನ್ಸರ್​ ರೋಗಿಗಳಿಗೆ ಕಂದಮ್ಮನ ಕೂದಲು ದಾನ:ಎರಡು ವರ್ಷ ನಾಲ್ಕು ತಿಂಗಳು ವಯಸ್ಸಿನ ಮಗುವಿನ ಕೂದಲನ್ನು ಪೋಷಕರು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದ ಘಟನೆ ಮಂಗಳೂರಿನಲ್ಲಿ ಕಳೆದ ವರ್ಷ ನಡೆದಿತ್ತು. ಮುರೋಳಿಯ ಸುಮಲತಾ ಮತ್ತು ಭರತ್​ ಕುಲಾಲ್​ ಎಂಬುವರ ಪುತ್ರಿ ಆದ್ಯ ಕುಲಾಲ್​ ಎಂಬ ಮಗುವಿನ ಕೂದಲನ್ನು ದಾನ ಮಾಡಲಾಗಿತ್ತು.

ಮೂಡಬಿದಿರೆಯ ಬಾಲಕಿಯ ಮಾದರಿ ನಡೆ:ತನ್ನ ಚಿಕ್ಕಮ್ಮನಿಂದ ಪ್ರೇರಣೆ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ತಾನಿಯಾ (9 ವರ್ಷ) ಎಂಬ ಬಾಲಕಿ ಕ್ಯಾನ್ಸರ್​ ಪೀಡಿತರಿಗಾಗಿ ಕೇಶದಾನ ಮಾಡಿ ಸಮಾಜಕ್ಕೆ ಆದರ್ಶ ಮೆರೆದಿದ್ದಳು. ಸೇವಾ ಮಾಣಿಕ್ಯಳೆಂದು ಬಿರುದು ಪಡೆದಿರುವ ಈಕೆ ಲೋಹಿತ್ ಎಸ್​. ಹಾಗು ಟೆಸ್ಲಿನಾ ದಂಪತಿಯ ಪುತ್ರಿ.

30 ಇಂಚು ಉದ್ದದ ಕೂದಲು ದಾನ ಮಾಡಿದ ಸೂರತ್‌ ಬಾಲಕಿ: ಸೂರತ್​ ಮೂಲದ ದೇವನಾ ದಾವೆಗೆ ಬಾಲ್ಯದಿಂದಲೂ ತನ್ನ ಕೂದಲೆಂದರೆ ತುಂಬಾ ಇಷ್ಟ. ಒಂದು ಬಾರಿಯೂ ಹೇರ್​ ಕಟ್​ ಮಾಡದೆ ಜತನದಿಂದ ಬೆಳೆಸಿದ್ದಳು. ತನ್ನ ತಲೆ ಕೂದಲು 30 ಇಂಚು ಉದ್ದ ಬೆಳೆದ ಬಳಿಕ ಆಕೆ ಕ್ಯಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡವರಿಗೆ ನೀಡಬೇಕೆಂದು ನಿರ್ಧರಿಸಿದ್ದಳು. ಅದರಂತೆ 2020 ರಲ್ಲಿ ಈ ಬಾಲಕಿ ತನ್ನ ಕೂದಲು ದಾನ ಮಾಡಿದ್ದಳು.

ಮಾಧುರಿ ದೀಕ್ಷಿತ್​ ಪುತ್ರನಿಂದ ಕೂದಲು ದಾನ​: ಬಾಲಿವುಡ್‌ನ ಜನಪ್ರಿಯ​ ನಟಿ ಮಾಧುರಿ ದೀಕ್ಷಿತ್​ ಅವರ ಕಿರಿಯ ಪುತ್ರ ರಿಯಾನ್​ ಕ್ಯಾನ್ಸರ್​ ಜಾಗೃತಿ ದಿನದ ಅಂಗವಾಗಿ ತಮ್ಮ ತಲೆ ಕೂದಲನ್ನು ದಾನ ಮಾಡಿ ಕ್ಯಾನ್ಸರ್​ ರೋಗಿಗಳಿಗೆ ನೆರವಾಗಿದ್ದರು.

ಇದನ್ನೂ ಓದಿ:ದೇಶದಲ್ಲಿ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಂಗಾಂಗ ದಾನ

ABOUT THE AUTHOR

...view details