ಕರ್ನಾಟಕ

karnataka

ETV Bharat / state

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು ಅಂದ್ರೆ ಡಮ್ಮಿನಾ..? ಎಲ್ಲದಕ್ಕೂ ಅಧ್ಯಕ್ಷರತ್ರಾ ಹೋಗ್ತೀರಾ?

ಜಿಲ್ಲಾ ಪಂಚಾಯತಿ​ ಸದಸ್ಯರು, ಅಧಿಕಾರಿಗಳು ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ಕೊಡುವ ಗೌರವವನ್ನು ಜಿಪಂ ಉಪಾಧ್ಯಕ್ಷರಿಗೆ ಕೊಡುತ್ತಿಲ್ಲ. ಕಾಮಗಾರಿ ಸೇರಿದಂತೆ ಪ್ರತಿಯೊಂದು ಕೆಲಸದಲ್ಲೂ ನನ್ನ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾದ್ರೆ, ಜಿಪಂ ಉಪಾಧ್ಯಕ್ಷರು ಅಂದ್ರೆ ಡಮ್ಮಿನಾ? ಎಂದು ಎನ್.ಪಿ.ಸುಶೀಲಮ್ಮ

zilla panchayat general meeting in chitradurga

By

Published : Aug 29, 2019, 5:22 PM IST

ಚಿತ್ರದುರ್ಗ:ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಸ್ಥಾನ ಅಂದ್ರೆ ಡಮ್ಮಿನಾ...? ಸದಸ್ಯರಾಗಲಿ, ಅಧಿಕಾರಿಗಳಾಗಲಿ, ಪ್ರತಿಯೊಂದು ವಿಷಯಕ್ಕೂ ಅಧ್ಯಕ್ಷರೇ ಅಂತೀರಾ. ನಾನಂದ್ರೆ ಯಾರಿಗೂ ಲೆಕ್ಕಕ್ಕಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೂ ಯಾವೊಬ್ಬ ಅಧಿಕಾರಿ ಮುಖವನ್ನು ನಾನು ನೋಡಿಲ್ಲ. ಯಾರ ಬಳಿಯೂ ನನ್ನ ನಂಬರ್ ಕೂಡ​ ಇಲ್ಲ. ಎಲ್ಲರೂಅಧ್ಯಕ್ಷರೇ ಅಂತಾರೆ. ಉಪಾಧ್ಯಕ್ಷರು ಎಂದರೆ ಲೆಕ್ಕಕ್ಕಿಲ್ಲ ಅಂತಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ

ನಾನಿಲ್ಲಿ ಇದ್ದೀನಿ ಅನ್ನೋದನ್ನ ಎಲ್ಲರೂ ಮರೆತಿದ್ದಾರೆ. ವಾಪಸ್ ಹೋಗ್ತಿನಿ ನೀವೇ ಸಭೆ ಮಾಡಿಕೊಳ್ಳಿ ಅಂತ ಎದ್ದು ಸಭೆಯಿಂದ ಹೊರ ನಡೆಯಲು ಮುಂದಾದರು. ಇನ್ನೂ ನನ್ನ ಕಚೇರಿಗೆ ಯಾವೊಬ್ಬ ಅಧಿಕಾರಿಯೂ ಬರೋದಿಲ್ಲ. ನನ್ನ ಏನನ್ನೂ ಕೇಳೋದಿಲ್ಲ ಎಂದು ಬೇಸರಗೊಂಡರು.

ಯಾವೊಬ್ಬ ಅಧಿಕಾರಿಯ ಮುಖವನ್ನೂ ನೋಡಿಲ್ಲ ಎಂದು ಸುಶೀಲಮ್ಮ ಹೇಳುತ್ತಿದ್ದಂತೆಅಧಿಕಾರಿಗಳು ಎದ್ದು ನಿಂತುಕೊಂಡರು.

ABOUT THE AUTHOR

...view details