ಚಿತ್ರದುರ್ಗ:ವೇದಾವತಿ ನದಿ ವೀಕ್ಷಣೆಗೆ ಬಂದಿದ್ದ ಯುವತಿ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟಿರುವ ಘಟನೆ ಚಳ್ಳಕೆರೆ ತಾಲೂಕಿನ ತಳಕು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ರಮ ಮರಳುಗಾರಿಕೆಯಿಂದಾದ ನದಿ ಗುಂಡಿಯಲ್ಲಿ ಬಿದ್ದು ಯುವತಿ ಸಾವು
ವೇದಾವತಿ ನದಿ ವೀಕ್ಷಣೆಗೆ ಬಂದಿದ್ದ ಯುವತಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ. ಮೃತಳನ್ನು ತಾಲೂಕಿನ ಕೇಣುಕಾಪುರ ಗ್ರಾಮದ ಸುಜಾತಾ (22) ಎಂದು ಗುರುತಿಸಲಾಗಿದೆ.
ವೇದಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಯುವತಿ ಸಾವು
ಮೃತಳನ್ನು ತಾಲೂಕಿನ ಕೇಣುಕಾಪುರ ಗ್ರಾಮದ ಸುಜಾತಾ (22) ಎಂದು ಗುರುತಿಸಲಾಗಿದೆ. ನದಿ ನೀರಿನ ವೀಕ್ಷಣೆಗೆ ಬಂದಿದ್ದ ಸುಜಾತಾ, ಆಳವಾದ ಮರಳು ಗುಂಡಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ.
ಸುಜಾತಾಳ ಸಾವಿಗೆ ಅಕ್ರಮ ಮರಳು ಸಾಗಣೆದಾರರು ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಮೃತ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿದ್ದರು.