ಚಿತ್ರದುರ್ಗ:ಜಿಲ್ಲೆಯ ಚಳ್ಳಕೆರೆ ನಗರದ (ತಿರುಮಲ ನರ್ಸಿಂಗ್ ಹೋಂ) ಖಾಸಗಿ ಆಸ್ಪತ್ರೆಗೆ ಡಿಹೆಚ್ಓ ಪಾಲಕ್ಷಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕಿತ್ಸೆಗೆ ಹಣ ಇಲ್ಲ ಅಂತ ಬಾಲಕಿಯನ್ನ ಆಸ್ಪತ್ರೆಯಿಂದ ಸಿಬ್ಬಂದಿ ಹೊರ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿ ಹಾಗೂ ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಬಾಲಕಿ ಅರ್ಚನಾ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇವು ಗ್ರಾಮದವರಾಗಿದ್ದು, ಟೈಫಾಯಿಡ್ ಜ್ವರಕ್ಕೆ ಬಳಲುತ್ತಿದ್ದು, ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ತನ್ನ ಅಜ್ಜಿ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಅರ್ಚನಾಳಿಗೆ ಟೈಫಾಯಿಡ್ ನಿಯಂತ್ರಣ ಮಾಡುವ ಸಲುವಾಗಿ ಚಳ್ಳಕೆರೆ ಖಾಸಗಿ ಆಸ್ಪತ್ರೆಯ ವೈದ್ಯರು ಗ್ಲುಕೋಸ್ ಹಾಕಿದ್ದರು. ಬಳಿಕ ಒಂದೇ ದಿನಕ್ಕೆ 3 ಸಾವಿರ ಬಿಲ್ ಆಸ್ಪತ್ರೆ ಸಿಬ್ಬಂದಿ ಮಾಡಿದ್ದರು. ಬಿಲ್ ಕಟ್ಟಲು ಬಡ ಅಜ್ಜಿ ಬಳಿ ಅಷ್ಟು ಹಣ ಇಲ್ಲ ಎಂದು ತಿಳಿದುಬಂದಾಗ ಗ್ಲುಕೋಸ್ ಡ್ರಿಪ್ ಸಮೇತ ಬಾಲಕಿಯನ್ನ ಆಸ್ಪತ್ರೆಯಿಂದ ಸಿಬ್ಬಂದಿ ಹೊರ ಹಾಕಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದರು.