ಕರ್ನಾಟಕ

karnataka

ETV Bharat / state

ಮೈದಾನಕ್ಕೆ ಶಿಫ್ಟ್ ಆದ ತರಕಾರಿ ಮಾರುಕಟ್ಟೆ​: ಜನಸಂದಣಿ ನಿಯಂತ್ರಣಕ್ಕೆ ಹೊಸ ಪ್ಲಾನ್​ - chithradurga district administration

ತರಕಾರಿ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಮೈದಾನಗಳಿಗೆ ಶಿಫ್ಟ್ ಮಾಡಿ ಚಿತ್ರದುರ್ಗ ಜಿಲ್ಲಾಡಳಿತ ಕೊರೊನಾ ವೈರಸ್ ತಡೆಗೆ ಮುಂದಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಮೊಕ್ಕಾಂ ಹೂಡಿ ಸೂಚನೆ ನೀಡುತ್ತಿದ್ದಾರೆ.

ctd
ctd

By

Published : Mar 31, 2020, 10:01 AM IST

ಚಿತ್ರದುರ್ಗ: ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಜನಸಂದಣಿ‌ ತಡೆಗೆ ಹೊಸ ಪ್ಲಾನ್ ಮಾಡಿದೆ.

ತರಕಾರಿ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಮೈದಾನಗಳಿಗೆ ಶಿಫ್ಟ್ ಮಾಡಿ ಜಿಲ್ಲಾಡಳಿತ ಕೊರೊನಾ ವೈರಸ್ ತಡೆಗೆ ಮುಂದಾಗಿದೆ.

ತರಕಾರಿ ಮಾರುಕಟ್ಟೆಗಳು ಮೈದಾನಗಳಿಗೆ ಶಿಫ್ಟ್

ನಗರದ‌‌ ಎರಡು ಕಡೆ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಜಯದೇವ ಕ್ರೀಡಾಂಗಣ ಹಾಗೂ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶವನ್ನು ಜಿಲ್ಲಾಡಳಿತ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ತರಾಕಾರಿ ಖರೀದಿ ಮಾಡುವಂತೆ ಮನವಿ ಮಾಡಿದೆ.

ಬೆಳಗ್ಗೆ 6 ರಿಂದ 9 ಗಂಟೆವರೆಗೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಿದ್ದು, ಇಂದು ಜನ ಸಂದಣಿ ಸ್ವಲ್ಪಮಟ್ಟಿಗೆ ಹತೋಟಿಗೆ ಬಂದಿದೆ.
ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಮೊಕ್ಕಾಂ ಹೂಡಿ ಸೂಚನೆ ನೀಡುತ್ತಿದ್ದಾರೆ.

ABOUT THE AUTHOR

...view details