ಚಿತ್ರದುರ್ಗ: ದ್ವಿಚಕ್ರ ವಾಹನಕ್ಕೆ ಮೈನ್ಸ್ ಕಂಪನಿಯ ಲಾರಿ ಡಿಕ್ಕಿ ಹೊಡೆದು ಗರ್ಭಿಣಿ ಸೇರಿ ದುರ್ಮರಣಕ್ಕೀಡಾದ ಮೂವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗದ ಜಿಲ್ಲಾಧಿಕಾರಿ ಮುಂಭಾಗ ಪ್ರತಿಭಟನೆ ನಡೆಸಿದ ಮೃತರ ಸಂಬಂಧಿಕರು ನಿನ್ನೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ನಡೆದಿದ್ದ ಅಪಘಾತದಲ್ಲಿ ಒಂದೇ ಕುಟುಂಬ ಗರ್ಭಿಣಿ ದೀಪಾ, ಮಹಾತೇಂಶ್ ಹಾಗೂ ಚೇತನ್ ಎಂಬುವರು ಮೃತಪಟ್ಟಿದ್ದರು. ಮೈನ್ಸ್ಕಂ ಪನಿಯಿಂದ ಮೃತರಿಗೆ ಪರಿಹಾರ ಒದಗಿಸುವಂತೆ ಸಂಬಂಧಿಕರು ಒತ್ತಾಯಿಸಿದ್ದರು. ಆದರೆ, ಕಂಪನಿಯ ಮಾಲೀಕರು ಇದ್ಯಾವುದಕ್ಕೂ ಕಿವಿಗೊಡುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಹಿರೇಗುಂಟನೂರು ಗ್ರಾಮದ ಬಳಿ ಪದೆಪದೇ ಅಪಘಾತ ಸಂಭವಿಸುತ್ತಿವೆ. ಮೈನ್ಸ್ ಕಂಪನಿಯ ಲಾರಿಗಳಿಂದಲೇ ಅಧಿಕ ಅಪಘಾತಗಳಾಗಿವೆ. ಆದರೂ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಪಟ್ಟುಬಿಡದ ಪ್ರತಿಭಟನಾಕಾರರು ಸೂಕ್ತ ಪರಿಹಾರ ನೀಡುವಂತೆ ಕಚೇರಿಯ ಮುಖ್ಯ ದ್ವಾರದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಪರಿಹಾರ ನೀಡುವುದಕ್ಕಾಗಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಎಸ್ಪಿ ಅರುಣ್ ಮತ್ತು ಗೋವಾ ಅದಿರಿನ ಕಂಪನಿಯವರು ಸೇರಿದಂತೆ ಹಲವರು ಮೃತರ ಸಂಬಂಧಿಕರೊಂದಿಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆಸಿದರು.