ಕರ್ನಾಟಕ

karnataka

ETV Bharat / state

ದೇವಾಲಯದ ಬೀಗ ಮುರಿದು 2 ಕಾಣಿಕೆ ಹುಂಡಿಗಳನ್ನು ದೋಚಿದ ಖದೀಮರು..

ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿನ ಹುಂಡಿಗಳ ಕಳ್ಳತನವಾಗಿದೆ. ಈ ಕುರಿತು ಭರಮಸಾಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯದ ಹಣ ಹುಂಡಿ ಕದ್ದ ಖದೀಮರು

By

Published : Sep 17, 2019, 1:06 PM IST

ಚಿತ್ರದುರ್ಗ:ತಾಲೂಕಿನ ಮಾರಘಟ್ಟ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಗಳನ್ನು ದೋಚಿ ಖದೀಮರುಪರಾರಿಯಾಗಿದ್ದಾರೆ.

ದೇವಾಲಯದ ಕಾಣಿಕೆ ಹುಂಡಿಗಳನ್ನ ದೋಚಿದ ಖದೀಮರು..

ಸೆಪ್ಟಂಬರ್ 16ರಂದು​ ತಡರಾತ್ರಿ ದೇವಸ್ಥಾನದಲ್ಲಿ ಯಾರೂ ಇಲ್ಲದಿರೋದನ್ನು ಗಮನಿಸಿದ ಕಳ್ಳರು, ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು ₹1ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ ಆಗಿರುವ ಶಂಕೆ ವ್ಯಕ್ತವಾಗಿದೆ. ಹುಂಡಿಗಳನ್ನು ಒಡೆದು ಗ್ರಾಮದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.ಭರಮಸಾಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ABOUT THE AUTHOR

...view details