ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿರುವ ಇಂಜಿನಿಯರ್ಂಗ್ ವರ್ಕ್ಸ್ ನಲ್ಲಿ ಕೆಲಸ ಮಾಡುವ 20ಕ್ಕೂ ಹೆಚ್ಚು ಮಹಿಳೆಯರಿಗೆ ಇದು ನಿತ್ಯದ ಕೆಲಸ. ಕಬ್ಬಿಣವನ್ನ ಹದ ಮಾಡುವ ಮತ್ತು ಅದೇ ಲೋಹವನ್ನ ಕರಗಿಸುವುದರ ಜೊತೆಗೆ ಭಾರ ಎತ್ತುವ ಭುಜ ಬಲದ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಏಕೆ ಯಾವುದೇ ವಿದ್ಯೆ ಇಲ್ಲದೆ ಇಂಜಿನಿಯರಿಂಗ್ ಕೆಲಸವನ್ನು ಸಲೀಸಲಾಗಿ ನಿರ್ವಹಿಸಿ ಬೇಷ್ ಎನಿಸಿಕೊಂಡಿದ್ದಾರೆ.
ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು... ಈ ಗಟ್ಟಿಗಿತ್ತಿಯರು ಕಳೆದ ಐದಾರು ವರ್ಷಗಳಿಂದ ಇದೇ ಕಾಯಕವನ್ನ ಮಾಡ್ತಾ ಸಂಸಾರ ಸಾಗಿಸುತ್ತಿದ್ದಾರೆ. ಇನ್ನು ಕೆಲಸದ ಸ್ಥಳದಲ್ಲಿ ಪುರುಷರು ಕೂಡ ಇದ್ದು, ಅವರಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಮರ್ಥ್ಯ ಈ ಮಹಿಳೆಯರಿಗಿದೆ ಅನ್ನೋದು ಮಾಲೀಕರ ಮಾತು.
ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದಕ್ಕೆ ಪ್ರತೀಕವಾಗಿರುವ ಈ ನಾರಿಯರು ತಮ್ಮ ವೃತ್ತಿ ನೈಪುಣ್ಯತೆಯಿಂದ ದುರ್ಗದ ಓಬವ್ವಳನ್ನು ನೆನಪಿಸುತ್ತಿದ್ದಾರೆ. ಪುರುಷರಿಗೆ ಸಮಾನವಾದ ಕೆಲಸ ಮಾಡುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.