ಚಿತ್ರದುರ್ಗ: ಜಿಲ್ಲೆಯಲ್ಲಿ ಬೇಸಿಗೆಕಾಲ ಪ್ರಾರಂಭವಾಗಿದ್ದು ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಆಹಾರ,ನೀರಿಲ್ಲದೆ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಅಂತದ್ರಲ್ಲಿ ಪಕ್ಷಿಗಳ ಪೋಷಣೆಗೆಂದೇ ಇಲ್ಲೊಂದು ಟ್ರಸ್ಟ್ ಹುಟ್ಟಿಕೊಂಡಿದ್ದು ಅವುಗಳ ರಕ್ಷಣೆಗೆ ಮುಂದಾಗಿದೆ.
ಗುಬ್ಬಚ್ಚಿ ಟ್ರಸ್ಟ್ ಕಾರ್ಯಕರ್ತರಿಂದ ಪಕ್ಷಿಗಳ ರಕ್ಷಣೆ ಗುಬ್ಬಚ್ಚಿ ಟ್ರಸ್ಟ್ ಎಂಬ ಸಂಸ್ಥೆಯ ಕಾರ್ಯಕರ್ತರು ಪಕ್ಷಿಗಳ ರಕ್ಷಣೆ ಮುಂದಾಗಿದ್ದಾರೆ. ನಗರದ ಕೂಗಳತೆಯ ದೂರದಲ್ಲಿರುವ ಜೋಗಿ ಮಟ್ಟಿ ವನ್ಯ ಧಾಮದಲ್ಲಿ ಕುಡಿಯಲು ಹನಿ ನೀರು ಸಿಗದೆ ಆಗಮಿಸುವ ಮೂಕ ಪ್ರಾಣಿಗಳ ವೇದನೆಯನ್ನು ಅರ್ಥ ಮಾಡಿಕೊಂಡ ಕಾರ್ಯಕರ್ತರು ಪ್ರತೀ ಮನೆಗಳ ಮುಂದೆ ಗೂಡುಗಳನ್ನು ಕಟ್ಟಿ ನೀರು ಹಾಕುವ ಮೂಲಕ ಜನರಲ್ಲಿ ಪಕ್ಷಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೃತಕ ಗೂಡುಗಳನ್ನು ತಯಾರಿಸುವ ಮೂಲಕ ಪ್ರತಿ ಮನೆ ಮನೆಗೆ ವಿತರಣೆ ಮಾಡಿ ಗುಬ್ಬಚ್ಚಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಅರಣ್ಯ ಇಲಾಖೆ ಕೂಡ ಕೈಜೋಡಿಸುವ ಮೂಲಕ ಸುಮಾರು 200 ಕ್ಕೂ ಹೆಚ್ಚು ಗೂಡುಗಳನ್ನು ನೀಡಿ ಪಕ್ಷಿಗಳ ರಕ್ಷಣೆಗೆ ಮುಂದಾಗುತ್ತಿದೆ. ಈ ಕೃತಕ ಗೂಡುಗಳನ್ನು ತಯಾರಿಸಲು ಟ್ರಸ್ಟ್ ನ ಪದಧಿಕಾರಿಗಳು ತಮ್ಮ ಸ್ವಂತ ಹಣವನ್ನು ವ್ಯಯ ಮಾಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರತೀ ವರ್ಷ ಗುಬ್ಬಚ್ಚಿ ಟ್ರಸ್ಟ್ ವತಿಯಿಂದ ವಿವಿಧ ಕೆಲಸಗಳನ್ನ ಮಾಡುವ ಇವರು, ಈ ಬಾರಿಯೂ ಈ ರೀತಿಯ ವಿನೂತನ ಪ್ರಯೋಗ ಮಾಡಿದ್ದು ಇದರಿಂದ ಮೂಕ ಪ್ರಾಣಿ, ಪಕ್ಷಿಗಳ ಸಮಸ್ಯೆಗೆ ಸ್ಪಂಧಿಸಿದ್ದಾರೆ, ರೀತಿಯ ಉತ್ತಮ ಕಾರ್ಯಗಳನ್ನ ಮಾಡೋದ್ರಿಂದ ಸಾರ್ವಜನಿಕರಲ್ಲಿಯೂ ಜಾಗೃತಿಯನ್ನು ಮೂಡಿಸಿದಂತಾಗುತ್ತಿದ್ದು ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.