ಚಿತ್ರದುರ್ಗ:ವಿಶ್ವ ವಿಖ್ಯಾತ ದಸರಾ ಸಂದರ್ಭದಲ್ಲಿ 9 ದಿನಗಳ ಕಾಲ ನಡೆಯುವ ಕೋಟೆನಾಡಿನ ದಸರಾ ಶರಣ ಸಂಸ್ಕೃತಿ ಉತ್ಸವಕ್ಕೆ ಬುಧವಾರ ಸೌಹಾರ್ದ ನಡಿಗೆ ಮೂಲಕ ಚಾಲನೆ ದೊರೆತಿದೆ.
ಶರಣ ಸಂಸ್ಕೃತಿ ಉತ್ಸವಕ್ಕೆ ಸೌಹಾರ್ದ ನಡಿಗೆ ಮೂಲಕ ಚಾಲನೆ - ಚಿತ್ರದುರ್ಗದ ಮುರುಘಾ ಮಠ
ಚಿತ್ರದುರ್ಗದ ಮುರುಘಾ ಮಠದಲ್ಲಿ ನಿನ್ನೆಯಿಂದ ಶರಣ ಸಂಸ್ಕೃತಿ ಉತ್ಸವ ಆರಂಭವಾಗಿದ್ದು, 'ಶರಣ ಸಂಸ್ಕೃತಿ ನಡಿಗೆ ಸೌಹಾರ್ದದೆಡೆಗೆ' ಎಂಬ ಘೋಷ ವಾಕ್ಯದೊಂದಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ನಿನ್ನೆಯಿಂದ ಶರಣ ಸಂಸ್ಕೃತಿ ಉತ್ಸವ ಆರಂಭವಾಗಿದ್ದು, 'ಶರಣ ಸಂಸ್ಕೃತಿ ನಡಿಗೆ ಸೌಹಾರ್ದದೆಡೆಗೆ' ಎಂಬ ಘೋಷ ವಾಕ್ಯದೊಂದಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ನಗರದ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಾರಂಭವಾದ ನಡಿಗೆ, ಪ್ರಮುಖ ರಸ್ತೆಗಳ ಮೂಲಕ ಸಾಗಿ ಇತಿಹಾಸ ಪ್ರಸಿದ್ಧ ಕಲ್ಲಿನ ಕೋಟೆವರೆಗೆ ಸಾಗಿತು. ಇನ್ನು ಸೌಹಾರ್ದ ನಡಿಗೆಯಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.