ಚಿತ್ರದುರ್ಗ: ಪ್ರವಾದಿಯನ್ನು ನಿಂದಿಸಿರುವ ಕಾರಣಕ್ಕೆ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿಯಲ್ಲಿ ನಡೆಸಲಾದ ಗಲಭೆಗೆ ಎಸ್ಡಿಪಿಐ ಕಾರಣ ಎಂದು ಆರೋಪಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನಗರದಲ್ಲಿ ಪ್ರತಿಭಟನೆ ನಡೆಸಿತು.
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ದಾಂಧಲೆ ಪ್ರಕರಣ: SDPI ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ - ಚಿತ್ರದುರ್ಗದಲ್ಲಿ ಪ್ರತಿಭಟನೆ
ಬೆಂಗಳೂರಿನ ಕೆ.ಜೆ.ಹಳ್ಳಿಯಲ್ಲಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಚಿತ್ರದುರ್ಗ ನಗರದಲ್ಲಿ ಎಸ್ಡಿಪಿಐ ಸಂಘಟನೆ ನಿಷೇಧಿಸುವಂತೆ ಪ್ರತಿಭಟನೆ ನಡೆಸಿದರು.
ಅಖಂಡ ಶ್ರೀನಿವಾಸ್ಮೂರ್ತಿ ಮನೆಯ ಮೇಲಾದ ದಾಳಿಗೆ ಕಾರಣೀಕರ್ತ ಸಂಘಟನೆ ಎಂದು ಹೇಳಲಾಗುತ್ತಿರುವ ಎಸ್ಡಿಪಿಐನ್ನು ಈ ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದ ಬಜರಂಗದಳ, ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರು ನಗರದ ಡಿಸಿ ವೃತ್ತದಲ್ಲಿ ಈ ಸಂಘಟನೆ ವಿರುದ್ದ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು
ಎಸ್ಡಿಪಿಐ ಸಂಘಟನೆಯಿಂದಾಗಿ ರಾಜ್ಯದಲ್ಲಿ ಪದೇ ಪದೇ ಅಶಾಂತಿ ಸೃಷ್ಟಿಯಾಗಿತ್ತಿದೆ. ಅಮಾಯಕರ ಮೇಲೆ ಹಲ್ಲೆ ನಡೆಸಿ ಆಸ್ತಿ-ಪಾಸ್ತಿ ನಷ್ಟ ಮಾಡಿದ್ದಾರೆ, ಕೂಡಲೇ ಈ ಸಂಘಟನೆಯನ್ನು ನಿಷೇಧಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.