ಚಿತ್ರದುರ್ಗ:ಇತ್ತೀಚೆಗೆ ಹಲ್ಲು ನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವಸಡಿನ ಕೆಳಭಾಗದ ಹಲ್ಲಿನ ಬಳಿ ತೀರ ಅಪರೂಪ ಎನ್ನಬಹುದಾದ ಬ್ಲ್ಯಾಕ್ ಫಂಗಸ್ ಕಂಡು ಬಂದಿದೆ.
ಹಲ್ಲು ನೋವಿಗಾಗಿ ಚಿಕಿತ್ಸೆಗೆ ಬಂದ ವ್ಯಕ್ತಿಯಲ್ಲಿ ಅಪರೂಪದ ಬ್ಲ್ಯಾಕ್ ಫಂಗಸ್ ಪತ್ತೆ - ಬ್ಲ್ಯಾಕ್ ಫಂಗಸ್ ಪ್ರಕರಣ
ಚಿತ್ರದುರ್ಗ ನಗರದ ಎಸ್.ಜೆ.ಎಂ ದಂತ ಮಹಾವಿದ್ಯಾಲಯದ ವೈದ್ಯರು ಹಲ್ಲು ನೋವಿಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಅಪರೂಪದ ಕಪ್ಪು ಶಿಲೀಂಧ್ರವನ್ನು ಪತ್ತೆ ಹೆಚ್ಚಿದ್ದಾರೆ.
ಚಿತ್ರದುರ್ಗ ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ವೈದ್ಯರು ಕಪ್ಪು ಶಿಲೀಂಧ್ರವನ್ನು ಪತ್ತೆ ಹಚ್ಚಿ ಹೆಚ್ಚಿನ ಚಿಕಿತ್ಸೆಗಾಗಿ ವ್ಯಕ್ತಿಯನ್ನು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.
ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪ್ರಶಾಂತ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಪಾಲಾಕ್ಷಪ್ಪ ಅವರ ಸೂಕ್ತ ಮಾರ್ಗದರ್ಶನದೊಂದಿಗೆ ಡಾ.ನಾಗರಾಜಪ್ಪ, ಡಾ.ಮಧುಮತಿ, ಡಾ.ನರಸಿಂಹಮೂರ್ತಿ, ಡಾ.ಆರ್. ಗೌರಮ್ಮ, ವೈದ್ಯರ ತಂಡದವರು ಚಿಕಿತ್ಸೆ ಮಾಡಿ ರೋಗಿಯನ್ನು ಅಪಾಯದಿಂದ ದೂರ ಮಾಡಿದ್ದಾರೆ. ಇವರ ಸೇವೆಯನ್ನು ಪ್ರಶಂಸಿಸಿ ಡಾ. ಶಿವಮೂರ್ತಿ ಮುರುಘಾ ಶರಣರು ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.