ಚಿತ್ರದುರ್ಗ: ಬೃಹತ್ ಚೆಕ್ ಡ್ಯಾಂ ಭರ್ತಿಯಾಗಿ ಮಳೆ ನೀರು ಜಮೀನಿಗೆ ನುಗ್ಗಿದ ಪರಿಣಾಮ ಈರುಳ್ಳಿ ಬೆಳೆ ಸಂಪೂರ್ಣ ನೀರು ಪಾಲಾಗಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಗರಣಿ ಹಳ್ಳದ ಚೆಕ್ ಡ್ಯಾಂ ಭರ್ತಿ: ಜಮೀನಿಗೆ ನೀರು ನುಗ್ಗಿ ಈರುಳ್ಳಿ ಬೆಳೆ ನಾಶ - ಚಳ್ಳಕೆರೆ ತಾಲೂಕಿನ ಗರಣಿ ಹಳ್ಳದ ಚೆಕ್ ಡ್ಯಾಂ
ಚಳ್ಳಕೆರೆ ತಾಲೂಕಿನ ಗರಣಿ ಹಳ್ಳದ ಬಳಿ ಬೃಹತ್ ಚೆಕ್ ಡ್ಯಾಂ ಭರ್ತಿಯಾಗಿದೆ. ಈ ಹಿನ್ನೆಲೆ ಮಳೆ ನೀರು ಜಮೀನಿಗೆ ನುಗ್ಗಿದ್ದು, ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ.

ಜಮೀನಿಗೆ ಮಳೆ ನೀರು ನುಗ್ಗಿ ಈರುಳ್ಳಿ ಬೆಳೆ ನಾಶ
ಜಮೀನಿಗೆ ಮಳೆ ನೀರು ನುಗ್ಗಿ ಈರುಳ್ಳಿ ಬೆಳೆ ನಾಶ
ಧಾರಾಕಾರ ಮಳೆಯಿಂದ ಚಳ್ಳಕೆರೆ ತಾಲೂಕಿನ ಗರಣಿ ಹಳ್ಳದ ಬೃಹತ್ ಚೆಕ್ ಡ್ಯಾಂ ಭರ್ತಿ ಹಿನ್ನೆಲೆಯಲ್ಲಿ ಈ ಅವಾಂತರ ಸೃಷ್ಟಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ತಿಮ್ಮಪ್ಪನವರಿಗೆ ಸೇರಿದ ಈರುಳ್ಳಿ ಬೆಳೆ ಇದಾಗಿದೆ. ಜಮೀನಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತ ತಿಮ್ಮಪ್ಪ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ರೈತ ತಿಮ್ಮಪ್ಪ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿದ್ದಾನೆ. ಇತ್ತ ಕೃಷಿ ಇಲಾಖೆ ಆಧಿಕಾರಿಗಳು ಮಾತ್ರ ಇತ್ತ ತಲೆ ಹಾಕಿ ಮಲಗದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.