ಚಿತ್ರದುರ್ಗ: ರಾಯಚೂರು ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಭಾಷಣ ವೇಳೆ ಕನ್ನಡ ಪದಗಳನ್ನು ಸರಿಯಾಗಿ ಉಚ್ಚಾರಣೆ ಮಾಡದೇ ತಪ್ಪು ತಪ್ಪಾಗಿ ಉಚ್ಚರಿಸಿದ್ದ ಸಚಿವ ಶ್ರೀರಾಮುಲು ವಿರುದ್ಧ ಕರ್ನಾಟಕ ನವ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡ ಪದ ಸರಿಯಾಗಿ ಉಚ್ಚರಿಸದ ಸಚಿವರ ವಿರುದ್ಧ ಪ್ರತಿಭಟನೆ! - raichur news
ಗಣರಾಜ್ಯೋತ್ಸವ ಭಾಷಣ ವೇಳೆ ಕನ್ನಡ ಪದಗಳನ್ನು ಸರಿಯಾಗಿ ಉಚ್ಚಾರಣೆ ಮಾಡದೇ ತಪ್ಪು ತಪ್ಪಾಗಿ ಉಚ್ಚರಿಸಿದ್ದ ಸಚಿವ ಶ್ರೀರಾಮುಲು ವಿರುದ್ಧ ಕರ್ನಾಟಕ ನವ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
protest-against-shriramulu-at-chitradurgha
ನಗರದ ಜಿ.ಪಂ. ಆವರಣದಲ್ಲಿರುವ ಸಚಿವರ ಜನ ಸಂಪರ್ಕ ಕಚೇರಿ ಎದುರು ಜಮಾಯಿಸಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಕನ್ನಡ ಕಲಿಯುವಂತೆ ಸಚಿವ ಶ್ರೀ ರಾಮುಲುರವರಲ್ಲಿ ಮನವಿ ಮಾಡಿದರು. ಕನ್ನಡ ಬಾರದ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವ ಬಿಜೆಪಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಬಳಿಕ ಸಚಿವ ಶ್ರೀ ರಾಮುಲು ಅವರ ಆಪ್ತ ಸಹಾಯಕ ಹನುಮಂತರಾಯಗೆ ಮನವಿ ಸಲ್ಲಿಸಿದರು.