ಕರ್ನಾಟಕ

karnataka

ETV Bharat / state

46 ಮಂದಿಗೆ ಸೋಂಕು....ಚಿತ್ರದುರ್ಗದಲ್ಲಿ ಓರ್ವ ಮಹಿಳೆ ಬಲಿ

437 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿತ್ತು. ವರದಿಯಲ್ಲಿ 46 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ.

Chitradurga corona case
Chitradurga corona case

By

Published : Aug 2, 2020, 7:28 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಪರೀಕ್ಷಾ ವರದಿಯಲ್ಲಿ ಮತ್ತೆ 46 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗೂ ಓರ್ವರು ಮೃತಪಟ್ಟಿದ್ದು ಜನರ ಆತಂಕ ಮತ್ತಷ್ಟು ಹೆಚ್ಚಿದೆ.

ಒಟ್ಟು 437 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿತ್ತು. ವರದಿಯಲ್ಲಿ 46 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಚಿತ್ರದುರ್ಗ ತಾಲೂಕಿನಲ್ಲಿ 3, ಹಿರಿಯೂರುನಲ್ಲಿ 5, ಚಳ್ಳಕೆರೆಯಲ್ಲಿ 25, ಹೊಸದುರ್ಗದಲ್ಲಿ 3 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 10 ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 767ಕ್ಕೆ ತಲುಪಿದೆ.

ಚಿತ್ರದುರ್ಗದ 45 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ಬಲಿಯಾಗಿದ್ದು ಒಟ್ಟು 16 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಪೈಕಿ ಈಗಾಗಲೇ 282 ಮಂದಿ ಸಂಪೂರ್ಣ ಗುಣಮುಖರಾಗಿ ಮನೆ ಸೇರಿದ್ದಾರೆ. ಸದ್ಯ 469 ಸಕ್ರಿಯ ಪ್ರಕರಣಗಳು ಇವೆ.

ABOUT THE AUTHOR

...view details