ಚಿತ್ರದುರ್ಗ: ಸಿದ್ದರಾಮಯ್ಯ ಅವರು ಕೂಡ ದೊಡ್ಡನಾಯಕರಿದ್ದಾರೆ. ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದವರು ಎಂದು ಬಾದಾಮಿಯಲ್ಲಿ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ಬಾದಾಮಿ ಕ್ಷೇತ್ರದಿಂದ ಮತ್ತೆ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ಮಾಡಲಿ, ಆದ್ರೆ ನಾನು ಸ್ಪರ್ಧೆ ಮಾಡುವ ವಿಚಾರ ಆಯಾ ಸಂದರ್ಭದಲ್ಲಿ ಪಕ್ಷ ನಿರ್ಧರಿಸಲಿದೆ ಎಂದರು.
ಸಾಮಾನ್ಯವಾಗಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಸಿಎಂ ಅಭ್ಯರ್ಥಿಗಳು. ಇಲ್ಲವೇ ನೆಹರು ಕುಟುಂಬದವರು, ಇಲ್ಲ ದೊಡ್ಡ ದೊಡ್ಡ ವ್ಯಕ್ತಿಗಳು. ಆದ್ರೆ ಭಾರತೀಯ ಜನತಾ ಪಾರ್ಟಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಈ ಅವಕಾಶ ನೀಡಿತು. ಆದರೆ ಬಾದಾಮಿಯ ಜನತೆ ಕಡಿಮೆ ಅಂತರಗಳಿಂದ ಸೋಲಿಸಿದರು. ಸಿದ್ದರಾಮಯ್ಯ ಅವರ ನಸೀಬು ಚೆನ್ನಾಗಿತ್ತು ಅವರ ಕ್ಷೇತ್ರದಲ್ಲಿ ಸೋತು ಬಾದಾಮಿಯಲ್ಲಿ ಗೆದ್ದರು ಎಂದಿದ್ದಾರೆ.