ಕರ್ನಾಟಕ

karnataka

ETV Bharat / state

ಸಮುದಾಯ ಮತ್ತು ಸರ್ಕಾರ ನನಗೆ 2 ಕಣ್ಣು : ಪಂಚಮಸಾಲಿ 2A ಹೋರಾಟ ಕುರಿತು ಸಚಿವ ಸಿಸಿ ಪಾಟೀಲ್ ಪ್ರತಿಕ್ರಿಯೆ - amith sha statement

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟದ ಕುರಿತಂತೆ ಸಿಎಂ ಬಿ ಎಸ್ ಬೊಮ್ಮಾಯಿ‌, ಜಯ ಮೃತ್ಯುಂಜಯ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ವಿವಾದ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸವಿದೆ..

minister cc patil reaction on panchamasali  protest
ಸಚಿವ ಸಿಸಿ ಪಾಟೀಲ್​ ಹೇಳಿಕೆ

By

Published : Sep 5, 2021, 6:54 PM IST

ಚಿತ್ರದುರ್ಗ :ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸಿ ಸಿ ಪಾಟೀಲ್​, ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಆ ಬಗ್ಗೆ ಪಕ್ಷದ ವರಿಷ್ಠರು ಕೇಳಿದ್ರೆ, ನಾಲ್ಕು ಗೋಡೆಗಳ ಮಧ್ಯೆ ನನ್ನ ಅಭಿಪ್ರಾಯ ತಿಳಿಸುವೆ. ಆದರೆ, ಮಾಧ್ಯಮದ ಮುಂದೆ ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಸಮುದಾಯದ ಹೋರಾಟ ಮತ್ತು ಸರ್ಕಾರದ ಬಗ್ಗೆ ಸಚಿವ ಸಿಸಿ ಪಾಟೀಲ್ ಮಾತನಾಡಿರುವುದು..

ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಸಚಿವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟದ ಕುರಿತಂತೆ ಸಿಎಂ ಬಿ ಎಸ್ ಬೊಮ್ಮಾಯಿ‌, ಜಯ ಮೃತ್ಯುಂಜಯ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ವಿವಾದ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸವಿದೆ. ಸಮುದಾಯ ಮತ್ತು ಸರ್ಕಾರ ನನಗೆ ಎರಡು ಕಣ್ಣುಗಳಿದ್ದಂತೆ, ಯಾವ ಕಣ್ಣು ಬೇಕು ಎಂದರೆ ಏನೂ ಹೇಳಲಾಗುವುದಿಲ್ಲ ಎಂದರು.

ಇದೀಗ ನಾಡಿನೆಲ್ಲೆಡೆ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಗಣೇಶೋತ್ಸವಕ್ಕೆ ನಿರ್ಬಂಧ ವಿಚಾರ ಧರ್ಮಸಂಕಟವಾಗಿದೆ. ನಾಡಿನ ಪರಂಪರೆಯನ್ನೂ ನೋಡಿಕೊಳ್ಳಬೇಕು ಜೊತೆಗೆ ಜನರ ಜೀವ ಮತ್ತು ಆರೋಗ್ಯವೂ ಕಾಪಾಡಬೇಕಿದೆ. ಸಂಸ್ಕೃತಿ, ಹಬ್ಬ-ಹರಿದಿನ ಆಚರಿಸಲು ಜನ ಉತ್ಸಾಹದಲ್ಲಿರ್ತಾರೆ.

ಉತ್ಸಾಹದಿಂದ ಜೀವಕ್ಕೆ ಅಪಾಯ ತಂದುಕೊಳ್ಳಬಾರದು. ಈಗಾಗಲೇ ಕೊವಿಡ್ 2ನೇ ಅಲೆಯಲ್ಲಿ ಅನೇಕರನ್ನು ಕಳೆದುಕೊಂಡಿದ್ದೇವೆ. 3ನೇ ಅಲೆ ಬಂದರೆ ಅದರ ಪರಿಣಾಮ ಊಹಿಸಲಾಗದು ಎಂದು ಆತಂಕ ವ್ಯಕ್ತಪಡಿಸಿದ್ರು.

ABOUT THE AUTHOR

...view details