ಚಿತ್ರದುರ್ಗ:ಸಾಮಾನ್ಯವಾಗಿ ಕೆಜಿಗಟ್ಟಲೆ ಮಟನ್, ಚಿಕನ್ ತಿನ್ನುವ ವ್ಯಕ್ತಿಗಳನ್ನು ನಾವು ನೋಡಿರುತ್ತೇವೆ. ಆದರೆ ಹಲ್ಲಿಯನ್ನು ಮೆಣಸಿನಕಾಯಿ ಬಜ್ಜಿಯಂತೆ ಸಲೀಸಾಗಿ ತಿನ್ನುವ ಭೂಪನೊಬ್ಬ ಕೋಟೆನಾಡು ಚಿತ್ರದುರ್ಗದಲ್ಲಿದ್ದಾನೆ.
ಜಿಲ್ಲೆಯ ಹೊಸದುರ್ಗ ತಾಲೂಕು ದೊಡ್ಡ ಬ್ಯಾಲದಕೆರೆ ನಿವಾಸಿ ಉಮೇಶ್ ಹಲ್ಲಿ, ಚೇಳುಗಳನ್ನು ಸಲೀಸಾಗಿ ತಿನ್ನುತ್ತಾನೆ. ಸಾರ್ವಜನಿಕರ ಮುಂದೆ ಹಲ್ಲಿಯನ್ನು ಸಲೀಸಾಗಿ ತಿಂದ ಉಮೇಶನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಜೀವಂತ ಹಲ್ಲಿಯನ್ನು ತಿಂದ ಭೂಪ ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಒಮ್ಮೊಮ್ಮೆ ಹಲ್ಲಿ ಬಿದ್ದ ಆಹಾರವನ್ನು ಸೇವಿಸಿ, ಕೆಲವರು ಅಸ್ವಸ್ಥರಾಗುವ ಘಟನೆಗಳನ್ನು ನಾವು ನೋಡಿರುತ್ತೇವೆ. ಆದರೆ ಜೀವಂತವಿರುವ ಹಲ್ಲಿಗಳನ್ನೇ ತಿಂದು ಜೀರ್ಣಿಸಿಕೊಳ್ಳುತ್ತಾನೆ ಈ ಉಮೇಶ. ಈತ ಹಲ್ಲಿಯನ್ನು ತಿನ್ನುವ ವಿಚಾರ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ಹಣೆಗೆ ಕಪ್ಪಿಟ್ಟು ಲಕ್ಷಾಂತರ ಹಣ, ಚಿನ್ನ ಹೊತ್ತೊಯ್ದ ಕೊಳ್ಳೇಗಾಲದ ಮಂತ್ರವಾದಿ