ಚಿತ್ರದುರ್ಗ: ಎಸ್ಟಿ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆ ಗುರು ಪೀಠದ ನಿರಂಜನಾನಂದ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಇಂದು ನಗರಕ್ಕೆ ತಲುಪಿದೆ.
ಚಿತ್ರದುರ್ಗಕ್ಕೆ ತಲುಪಿದ ಎಸ್ಟಿ ಮೀಸಲಾತಿ ಹೋರಾಟ ಪಾದಯಾತ್ರೆ ಕಾಗಿನೆಲೆ ಗುರುಪೀಠದಿಂದ ಜ.15 ರಂದು ಹೊರಟ ಎಸ್ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಇಂದು 10 ಗಂಟೆಗೆ ಚಿತ್ರದುರ್ಗ ತಿರುಮಲ ಕಲ್ಯಾಣ ಮಂಟಪಕ್ಕೆ ಬಂದು ತಲುಪಿದೆ. ಚಿತ್ರದುರ್ಗ ನಗರ ತಲುಪುತ್ತಿದ್ದಂತೆ ಭವ್ಯ ಸ್ವಾಗತ ಕೋರಲಾಗಿದೆ.
ಕೋಟೆನಾಡು ತಲುಪಿದ ಎಸ್ಟಿ ಮೀಸಲಾತಿ ಹೋರಾಟ ಪಾದಯಾತ್ರೆ
ಜಾನಪದ ವಾದ್ಯಗಳ ಕಲಾ ಮೇಳದೊಂದಿದೆ ಅದ್ಧೂರಿ ಸ್ವಾಗತ ಕೋರಲಾಗಿದ್ದು, ಇಂದು ಮಧ್ಯಾಹ್ನದ ಬಳಿಕ ಚಿತ್ರದುರ್ಗ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿದ್ದಾರೆಂದು ಅಂದಾಜಿಸಲಾಗಿದೆ. ಕೋಟೆನಾಡಿಗೆ ಪಾದಯಾತ್ರೆ ಅಗಮನವಾಗುತ್ತಿದ್ದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.