ಚಿತ್ರದುರ್ಗದ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ನಿಯಮಿತದಿಂದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಫ್ಡಿಎ, ಎಸ್ಡಿಎ ಸೇರಿದಂತೆ ಒಟ್ಟು 68 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಓದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನ ಅಕ್ಟೋಬರ್ 16 ಆಗಿದೆ. ಈ ಹುದ್ದೆ ಕುರಿತ ನೇಮಕಾತಿ, ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇತರೆ ಪ್ರಮುಖ ಮಾಹಿತಿ ಈ ಕೆಳಗಿನಂತಿದೆ..
ಹುದ್ದೆಗಳ ವಿವರ:
- ಸಹಾಯಕ ಪ್ರಧಾನ ವ್ಯವಸ್ಥಾಪಕರು- 6
- ಪ್ರಥಮ ದರ್ಜೆ ಗುಮಾಸ್ತರು - 9
- ದ್ವಿತೀಯ ದರ್ಜೆ ಗುಮಾಸ್ತರು - 35
- ಕಂಪ್ಯೂಟರ್ ಇಂಜಿನಿಯರ್ - 2
- ವಾಹನ ಚಾಲಕರು - 2
- ಸಹಾಯಕರು - 12
ವಿದ್ಯಾರ್ಹತೆ:
- ಸಹಾಯಕ ಪ್ರಧಾನ ವ್ಯವಸ್ಥಾಪಕರು: ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು
- ಪ್ರಥಮ ದರ್ಜೆ ಗುಮಾಸ್ತರು : ಯಾವುದೇ ವಿಷಯದಲ್ಲಿ ಪದವಿ
- ದ್ವಿತೀಯ ದರ್ಜೆ ಗುಮಾಸ್ತರು: ಯಾವುದೇ ವಿಷಯದಲ್ಲಿ ಪದವಿ
- ಕಂಪ್ಯೂಟರ್ ಇಂಜಿನಿಯರ್ : ಬಿಎಸ್ಸಿ, ಬಿಇ, ಬಿಟೆಕ್ ಪದವಿ
- ವಾಹನ ಚಾಲಕರು : ಎಸ್ಎಸ್ಎಲ್ಸಿ
- ಸಹಾಯಕರು : ಎಸ್ಎಸ್ಎಲ್ಸಿ
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ ವಯೋಮಿತಿ 35 ವರ್ಷ ಹೊಂದಿರಬೇಕು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ. ಜಾ, ಪ.ಪಂ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.