ಕರ್ನಾಟಕ

karnataka

ETV Bharat / state

ಕೆಡಿಪಿ ಸಭೆಯಲ್ಲಿ ಹೊಳಲ್ಕೆರೆ ಶಾಸಕ - ಎಸ್ಪಿ ಮಧ್ಯೆ ಜಟಾಪಟಿ

ಪೊಲೀಸ್ ವರ್ಗಾವಣೆ ಮಾಹಿತಿ ಕೊಡಿ ಎಂದು ಶಾಸಕ ಚಂದ್ರಪ್ಪ ಅವರು ಎಸ್ಪಿ ಮೇಲೆ‌ ಮತ್ತೆ ಕಿಡಿಕಾರಿದ್ದರಿಂದ, ಸಭೆಯಲ್ಲೇ ಎಸ್ಪಿ ಅರುಣ್ ತಿರುಗಿಬಿದ್ದರು. ಇದು ಕೆಡಿಪಿ ಸಭೆ ಸರ್, ಇಲ್ಲಿ ಏನು ಮಾತನಾಡಬೇಕೋ ಅದನ್ನ ಮಾತಾಡಿ ಎಂದು ಪ್ರತ್ಯುತ್ತರ ನೀಡಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.

ಕೆಡಿಪಿ ಸಭೆಯಲ್ಲಿ ಹೊಳಲ್ಕೆರೆ ಶಾಸಕ - ಎಸ್ಪಿ ಜಟಾಪಟಿ

By

Published : Oct 18, 2019, 6:53 PM IST

ಚಿತ್ರದುರ್ಗ : ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಮತ್ತು ಎಸ್​ಪಿ ಡಾ. ಕೆ. ಅರುಣ್ ನಡುವೆ ವಾಗ್ವಾದ ಉಂಟಾಯಿತು.

ಎಸ್ಪಿ ವಿರುದ್ಧ ಸಭೆಯಲ್ಲೇ ಹರಿಹಾಯ್ದ ಶಾಸಕ ಚಂದ್ರಪ್ಪ, ಜಿಲ್ಲೆಯಲ್ಲಿ ಮಾದಕ ದ್ರವ್ಯ, ವಸ್ತುಗಳ ಮಾರಾಟದ ಭರಾಟೆ ಹೆಚ್ಚಾಗಿದೆ. ಪೊಲೀಸರು ಏನು ಮಾಡುತ್ತಿದ್ದಾರೆ ಅಂತ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕೆ. ಅರುಣ್ ಅವರು ಮಾದಕವಸ್ತು ಮಾರಾಟಕ್ಕೆ ಕಡಿವಾಣ ಹಾಕಿದ್ದೇವೆ, ನನ್ನ ಬಳಿ ಅಂಕಿಅಂಶ ಇದೆ. ಮಾಹಿತಿ ಇಲ್ಲದೆ ಸುಮ್ಮನೆ ಮಾತನಾಡಬೇಡಿ ಎಂದು ಗದರಿದರು.

ಕೆಡಿಪಿ ಸಭೆಯಲ್ಲಿ ಹೊಳಲ್ಕೆರೆ ಶಾಸಕ - ಎಸ್ಪಿ ಜಟಾಪಟಿ

ಪೊಲೀಸರು 10 ವರ್ಷಗಳಿಂದ ಒಂದೇ ಕಡೆ ಗೂಟ ಹೂಡಿಕೊಂಡು ಕೂತಿದ್ದರು, ಜಿಲ್ಲಾ ಎಸ್ಪಿ ಏನ್ ಮಾಡುತ್ತಿದ್ದಾರೆ ಎಂದು ಶಾಸಕ ಚಂದ್ರಪ್ಪ ಪ್ರಶ್ನಿಸಿದ ಬೆನ್ನಲ್ಲೇ ನಾನು ಎಸ್ಪಿ ಆಗಿ ಜಿಲ್ಲೆಗೆ ಬಂದ ಮೇಲೆ ಯಾರನ್ನೂ ಬಿಟ್ಟಿಲ್ಲ. ಅಗತ್ಯಕ್ಕೆ ಅನುಸಾರವಾಗಿ ವರ್ಗಾವಣೆ ಮಾಡಿದ್ದೇನೆ, ಬೇಕಿದ್ದರೆ ಮಾಹಿತಿ ಕೊಡುತ್ತೇನೆ ಎಂದರು.

ಪೊಲೀಸ್ ವರ್ಗಾವಣೆ ಮಾಹಿತಿ ಕೊಡಿ ಎಂದು ಶಾಸಕ ಚಂದ್ರಪ್ಪ ಎಸ್ಪಿ ಮೇಲೆ‌ ಮತ್ತೆ ಕಿಡಿಕಾರಿದ್ದರಿಂದ, ಸಭೆಯಲ್ಲೇ ಎಸ್ಪಿ ಅರುಣ್ ತಿರುಗಿಬಿದ್ದರು. ಇದು ಕೆಡಿಪಿ ಸಭೆ ಸರ್, ಇಲ್ಲಿ ಏನು ಮಾತನಾಡಬೇಕೋ ಅದನ್ನ ಮಾತಾಡಿ ಎಂದು ಶಾಸಕರಿಗೆ ಪ್ರತ್ಯುತ್ತರ ನೀಡಿದರು. ಇದು ಶಾಸಕರನ್ನು ಕರೆಳಿಸಿತು. ಇನ್ನು ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಪರಿಸ್ಥಿತಿ ತಿಳಿಗೊಳಿಸಿದರು.

ABOUT THE AUTHOR

...view details