ಚಿತ್ರದುರ್ಗ:ಒಂದು ಕಾಲದಲ್ಲಿ ಕಾಂಗ್ರೆಸ್ನವರನ್ನು ಬಿಜೆಪಿಯವರು ದಿಲ್ಲಿಯ ಗುಲಾಮರು ಎನ್ನುತ್ತಿದ್ದರು, ಅದ್ರೆ ನಾವು ಹೈಕಮಾಂಡ್ ನಿರ್ಯಣಕ್ಕೆ ಬದ್ಧರಾಗಿರುತ್ತಿದ್ದೆವು. ಇದೀಗ ಬಿಜೆಪಿಯರೇ ಮೋದಿ ಹಾಗೂ ಅಮಿತ್ ಶಾ ಅವರ ಗುಲಾಮರಾಗಿದ್ದಾರೆ. ಹೈಕಮಾಂಡ್ ಮುಂದೆ ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ್ರು.
ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹಾಗಾಗಿ ಕೈ-ದಳ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಳಿಕ ಬಿಜೆಪಿ ವಾಮಮಾರ್ಗದಿಂದ ಸರ್ಕಾರ ಕೆಡವಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮುಖ್ಯಮಂತ್ರಿಯವರೇ ಎಲ್ಲಾ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡು ಆಡಳಿತ ನಡೆಸಿದವರು ಇವರೇ ಮೊದಲಿಗರು ಎಂದು ಟೀಕಿಸಿದ್ರು.
ನೆರೆಯಿಂದ ಉತ್ತರ ಕರ್ನಾಟಕ ಮುಳುಗಿದ್ರೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡದೆ ಅನುದಾನ ಕೂಡ ನೀಡಲು ಮುಂದಾಗಲಿಲ್ಲ. 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸದರೂ ಯಾವುದೇ ಪ್ರಯೋಜನ ಆಗಲಿಲ್ಲಿ. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ನಯಾಪೈಸೆ ಘೋಷಣೆ ಮಾಡಲಿಲ್ಲ. ತಕ್ಷಣ ನೆರೆ ಹಾವಳಿ ವೀಕ್ಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡ್ಬೇಕೆಂದು ಮಾಜಿ ಸಚಿವ ಹೆಚ್ ಆಂಜನೇಯ ಒತ್ತಾಯಿಸಿದರು.