ಚಿತ್ರದುರ್ಗ: ವಿದ್ಯುತ್ ಅವಘಡಕ್ಕೆ ಬಾಲಕಿ ಬಲಿ ಆಗಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ: ನೀರು ತರಲು ಬಾವಿಗೆ ಹೋದ ಹುಡುಗಿ ವಿದ್ಯುತ್ ಸ್ಪರ್ಶಿಸಿ ಸಾವು - ಬಾಲಕಿ ಬಲಿ
ವಿದ್ಯುತ್ ಅವಘಡಕ್ಕೆ ಬಾಲಕಿ ಬಲಿ ಆಗಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ. ಓಬಯ್ಯನಹಟ್ಟಿ ಗ್ರಾಮದ ಎಂ. ತಿಪ್ಪಿರಮ್ಮ ನೀರು ತರಲು ಬಾವಿ ಸಮೀಪ ಹೋದಾಗ ಪ್ಲಗ್ ಬಾಕ್ಸ್ ಮುಟ್ಟಿ ಈ ದುರ್ಘಟನೆ ಸಂಭವಿಸಿದೆ.
ಓಬಯ್ಯನಹಟ್ಟಿ ಗ್ರಾಮದ ಎಂ. ತಿಪ್ಪಿರಮ್ಮ (15) ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ. ಗ್ರಾಮದ ಸಮೀಪ ತೋಟದ ಮನೆಯಲ್ಲಿ ವಿದ್ಯುತ್ ಅವಘಡ ನಡೆದು ಬಾಲಕಿ ಸಾವನಪ್ಪಿದ್ದಾಳೆ. ತಿಪ್ಪಿರಮ್ಮ ನೀರು ತರಲು ಬಾವಿ ಸಮೀಪ ಹೋದಾಗ ಪ್ಲಗ್ ಬಾಕ್ಸ್ ಮುಟ್ಟಿ ಈ ದುರ್ಘಟನೆ ಸಂಭವಿಸಿದೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಬಾಪೂಜಿ ಬಾಲಕಿಯರ ಪ್ರೌಢಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತಿಪ್ಪಿರಮ್ಮ ಇಂದು ವಿದ್ಯುತ್ ಸ್ಪರ್ಶಿಸಿ ಯಾರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಇನ್ನೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಸದ್ಯ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.