ಕರ್ನಾಟಕ

karnataka

ETV Bharat / state

ಕಡಿಮೆ ಬೆಲೆಗೆ ಭೂಮಿ ಸ್ವಾಧೀನಕ್ಕೆ‌ ಮುಂದಾದ ಚಿತ್ರದುರ್ಗ ಜಿಲ್ಲಾಡಳಿತ: ರೈತರ ಆಕ್ರೋಶ - ಭದ್ರಾ ಜಲಾಶಯ

ಗ್ರಾಮಗಳ ಸುತ್ತಮುತ್ತಲಿನ ಜಮೀನಿಗಳಲ್ಲಿ ಭದ್ರಾ ಕಾಲುವೆಗಳು ಹರಿದು ಹೋಗಲಿದ್ದು, ಅದರ ನಿರ್ಮಾಣಕ್ಕೆ ಸುಮಾರು 400 ರಿಂದ 500 ಎಕರೆ‌‌ ಕೃಷಿ ಭೂಮಿಯನ್ನು ಕಡಿಮೆ ಬೆಲೆ ನಿಗದಿಪಡಿಸಿ ಭೂಸ್ವಾಧೀನ‌ಮಾಡಿಕೊಳ್ಳಲು ಚಿತ್ರದುರ್ಗ ಜಿಲ್ಲಾಡಳಿತ ನಿರ್ಧರಿಸಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

farmears
farmears

By

Published : Sep 25, 2020, 6:57 PM IST

ಚಿತ್ರದುರ್ಗ:ಜಿಲ್ಲೆಯ ರೈತರ ಬಹು ವರ್ಷಗಳ‌ ಕನಸು ನನಸಾಗಿದೆ. ಭದ್ರಾ ಜಲಾಶಯದಿಂದ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿದಿದ್ದು, ಇತ್ತ ಭದ್ರಾ ಕಾಲುವೆಗಳ ಕಾಮಗಾರಿ ಇನ್ನು ಬಾಕಿ ಇದೆ. ಅದ್ರೇ ಆ ಕಾಲುವೆ ನಿರ್ಮಾಣ ಮಾಡಲು ಬೇಕಾದ ರೈತರ ಜಮೀನುಗಳನ್ನು ಜಿಲ್ಲಾಡಳಿತ‌ ಕಡಿಮೆ ಬೆಲೆ‌ ನಿಗದಿಪಡಿಸಿ ಭೂಸ್ವಾಧೀನಕ್ಕೆ ಮುಂದಾಗಿದ್ದು, ಕಡಿಮೆ ಬೆಲೆಗೆ ಭೂಮಿ ನೀಡಲು ರೈತರ ಹಿಂದೇಟು ಹಾಕುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗರಗ ಹಾಗೂ ಮೈಲಾಪುರ‌ ಎಂಬ ಗ್ರಾಮಗಳ ಸುತ್ತಮುತ್ತಲಿನ ಜಮೀನಿಗಳಲ್ಲಿ ಭದ್ರಾ ಕಾಲುವೆಗಳು ಹರಿದು ಹೋಗಲಿದ್ದು, ಅದರ ನಿರ್ಮಾಣಕ್ಕೆ ಸುಮಾರು 400 ರಿಂದ 500 ಎಕರೆ‌‌ ಕೃಷಿ ಭೂಮಿಯನ್ನು ಕಡಿಮೆ ಬೆಲೆ ನಿಗದಿಪಡಿಸಿ ಭೂಸ್ವಾಧೀನ‌ಮಾಡಿಕೊಳ್ಳಲು ಚಿತ್ರದುರ್ಗ ಜಿಲ್ಲಾಡಳಿತ ನಿರ್ಧರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತದ ವಿರುದ್ಧ ರೈತರ ಆಕ್ರೋಶ

ಸಾಕಷ್ಟು ಚಿಕ್ಕ‌ ಪುಟ್ಟ ರೈತರ ಜಮೀನುಗಳೇ ಹೆಚ್ಚು ಈ ಭದ್ರಾ ಕಾಲುವೆಗಳ ನಿರ್ಮಾಣ ಕಾಮಗಾರಿಗೆ ಬಲಿಯಾಗಿದ್ದು, ಒಂದು ಗುಂಟೆಗೆ ಐದರಿಂದ ಆರು ಸಾವಿರ ರೈತರಿಗೆ ಪರಿಹಾರ ನೀಡಿ‌ ಕೈ ತೊಳೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಇತ್ತ ಅದೇ ಜಮೀನಿಗಳಿಗೆ ಒಂದು ಗುಂಟೆಗೆ ಮೂವತ್ತು ಸಾವಿರ ಸ್ಥಳೀಯ ಬೆಲೆ ಇದ್ದರಿಂದ ರೈತರು ತಮ್ಮ ಜಮೀನುಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲಾಡಳಿತ ಮಾತ್ರ‌, ಒಂದು ಗುಂಟೆಗೆ ಐದು‌ ಸಾವಿರ ನೀಡಲು ಮುಂದಾಗಿದ್ದರಿಂದ ಗರಗ ಹಾಗೂ ಮೈಲಾಪುರ‌ ಗ್ರಾಮದ ರೈತರು ಜಿಲ್ಲಾಧಿಕಾರಿ ಕವಿತಾ ಎಸ್‌ ಮನ್ನೀಕೆರಿಯವರಿಗೆ‌ ತಮ್ಮ ಜಮೀನುಗಳಿಗೆ ಹೆಚ್ಚು ಬೆಲೆ ನೀಡಿ ಭೂಸ್ವಾಧೀನ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಈ ಭದ್ರಾ ಕಾಲುವೆ ಕಾಮಗಾರಿಗೆ ಸಾಕಷ್ಟು ಚಿಕ್ಕ ಪುಟ್ಟ ರೈತರು ಬಲಿಯಾಗುತ್ತಿರುವುದ್ದರಿಂದ ಜಮೀನು ನೀಡಲು ಯೋಚಿಸುವಂತಾಗಿದೆ.

ಚಿತ್ರದುರ್ಗ ಜಿಲ್ಲಾಡಳಿತದ ಈ ನಡೆ ರೈತ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಡಿಮೆ ಬೆಲೆ ನೀಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದು, ಸ್ಥಳೀಯ ಬೆಲೆ ನಿಗದಿಪಡಿಸಿ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಿ ಎಂದು ರೈತ ಸಂಘಟನೆಗಳು ಹೇಳುತ್ತಿವೆ. ಜಿಲ್ಲಾಡಳಿತ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಮೀನುಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವುದ್ದರಿಂದ 30 ರಿಂದ 40ಕ್ಕೆ ಒಂದು ಗುಂಟೆ ಬೆಲೆ ಬಾಳುತ್ತಿವೆ. ಒಂದು ಗುಂಟೆಗೆ 30 ಸಾವಿರ ನೀಡಿ ಜಿಲ್ಲಾಡಳಿತ ಖರೀದಿಸಿದರೆ ಮಾತ್ರ ತಮ್ಮ ಜಮೀನು ನೀಡ್ತೀವಿ ಇಲ್ಲ ಎನ್ನುವುದಾದರೆ ಜಮೀನುಗಳನ್ನು ನೀಡುವುದಿಲ್ಲ ಎಂದು ರೈತರು ಹಠಕ್ಕೆ ಬಿದ್ದಿದ್ದಾರೆ.

ABOUT THE AUTHOR

...view details