ಚಿತ್ರದುರ್ಗ:ಜಮೀನು ವಿಚಾರವಾಗಿ ಸೊಸೆಯಂದಿರ ನಡುವಿನ ಜಗಳ ಸಾವಿನಲ್ಲಿ ಅಂತ್ಯ ಕಂಡ ಘಟನೆ ಚಳ್ಳಕೆರೆ ತಾಲೂಕಿನ ಪಿ.ಓ ಬನವೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜ್ಜಮ್ಮ(30) ಸಾವನ್ನಪ್ಪಿರುವ ಮಹಿಳೆ. ಜಮೀನು ಪಾಲು ವಿಚಾರವಾಗಿ ಒಂದೇ ಕುಟುಂಬದ ಮೂವರು ಸೊಸೆಯಂದಿರು ಜಗಳ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಥಳಿತದಿಂದ ತೀವ್ರವಾಗಿ ಗಾಯಗೊಂಡ ಮಂಜಮ್ಮನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾಳೆ.