ಚಿತ್ರದುರ್ಗ:ಐಎಎಸ್ ಕೋಚಿಂಗ್ ತೆಗೆದುಕೊಳ್ಳಲು ದೆಹಲಿಗೆ ಹೋಗಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ, ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಸಕ್ಕರ ಗ್ರಾಮದ ಯುವಕನಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಸಕ್ಕರ ಗ್ರಾಮದ 23 ವರ್ಷದ ವ್ಯಕ್ತಿ (ಪಿ-2584) ಕೋವಿಡ್-19 ವೈರಸ್ ಸೋಂಕಿರುವುದು ದೃಢಪಟ್ಟಿದೆ. ಲಾಕ್ಡೌನ್ ಸಡಿಲಿಕೆಯಾದ ಬಳಿಕ ಮೇ. 14 ರಂದು ದೆಹಲಿಯಿಂದ ಹೊರಟು ಹುಬ್ಬಳ್ಳಿಗೆ ಮೇ. 15 ರಂದು ಆಗಮಿಸಿದ್ದರು. ಇವರೊಂದಿಗೆ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಮೊಳಕಾಲ್ಮೂರು, ಹೊಳಲ್ಕರೆ ತಾಲೂಕಿನ ಇತರೆ 12 ಜನ ಕೂಡ ಬಂದಿದ್ದರು. ಇವರಲ್ಲಿ ವಿದ್ಯಾರ್ಥಿಗಳು ಹಾಗೂ ವಲಸೆ ಕಾರ್ಮಿಕರು ಇದ್ದರು. ಮೇ. 16 ರಂದು 12 ಜನರ ತಂಡ ಕೆಎಸ್ಆರ್ಟಿಸಿ ಬಸ್ ಸಂಖ್ಯೆ ಕೆಎ 63 ಎಫ್ 0170 ಮೂಲಕ ಚಿತ್ರದುರ್ಗ ಜಿಲ್ಲೆಗೆ ಬಂದರು.