ಚಿತ್ರದುರ್ಗ :ತಾಲೂಕಿನ ಕುಂಚಿಗನಾಳ್ ಹಾಗೂ ಕುರುಮರಡಿ ಕೆರೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಬ್ಬಾ.. ಈ ಚಿರತೆ ನೋಡಿ ಹೇಗೆ ಅಟ್ಯಾಕ್ ಮಾಡ್ತು...: ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ - ಚಿತ್ರದುರ್ಗ
ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಹಾಗೂ ಕುರುಮರಡಿ ಕೆರೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುರುಮರುಡಿ ಕೆರೆ ಸಮೀಪ ನಾಯಿ ಬೇಟೆಯಾಡಲು ಚಿರತೆ ಯತ್ನಿಸಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿರುವ ದೃಶ್ಯ ಕೂಡ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ
ಕುರುಮರುಡಿ ಕೆರೆ ಸಮೀಪ ನಾಯಿ ಬೇಟೆಯಾಡಲು ಚಿರತೆ ಯತ್ನಿಸಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿರುವ ದೃಶ್ಯ ಕೂಡ ಮೊಬೈಲ್ನಲ್ಲಿ ಸೆರೆಯಾಗಿದೆ.
ಅಲ್ಲದೆ, ಚಂದ್ರವಳ್ಳಿ ಗುಹೆಯ ಬಳಿ ಬಂಡೆಯ ಮೇಲೆ ಚಿರತೆ ಪ್ರತ್ಯಕ್ಷವಾಗಿದ್ದು, ವಾಯು ವಿಹಾರಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಇನ್ನು ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆಯ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಕಾಣಿಸಿಕೊಂಡ ಚಿರತೆಗಳು ಆಹಾರಕ್ಕಾಗಿ ನಾಡಿನ ಕಡೆ ಮುಖ ಮಾಡಿವೆ.